ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ ಮೂರೇ ತಿಂಗಳಿಗೆ ದಂಪತಿ ದುರಂತ ಅಂತ್ಯ ಕಂಡಿದ್ದಾರೆ.
ದೆಹಲಿಯ ಅಂಜಲಿ ಹಾಗೂ ಅಭಿಷೇಕ್(25) ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.
ಇಬ್ಬರೂ ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದ ವೇಳೆ ಅಭಿಷೇಕ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು. ಸ್ನೇಹಿತರ ಸಹಾಯದಿಂದ ಅಂಜಲಿ ಅಭಿಷೇಕ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಎರಡು ಮೂರು ಆಸ್ಪತ್ರೆ ಅಲೆದ ನಂತರ ವೈದ್ಯರು ಅಭಿಷೇಕ್ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕುಟುಂಬದವರು ಸ್ಥಳಕ್ಕೆ ಆಗಮಿಸಿ ಅಭಿಷೇಕ್ ಮೃತದೇಗವನ್ನು ಮನೆಗೆ ಕರೆತಂದಿದ್ದಾರೆ.
ಇತ್ತ ಅಭಿಷೇಕ್ ಕುಟುಂಬದವರು ಮೃತದೇಹ ನೋಡಿ ಕಣ್ಣೀರಿಟ್ಟಿದ್ದು, ಅತ್ತ ಅಂಜಲಿ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಗೆ ಹೋಗಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಅಗಲಿಕೆ ನೋವನ್ನು ತಾಳಲಾರದೆ ಅಂಜಲಿ ಆತ್ಮಹತ್ಯೆಗೆ ಶರಣಾಗಿದ್ದು, ಎರಡೂ ಕುಟುಂಬದವರು ಮಕ್ಕಳನ್ನು ಕಳೆದುಕೊಂಡು ನೋವು ಅನುಭವಿಸಿದ್ದಾರೆ.