Friday, September 12, 2025

15 ಲಕ್ಷ ಪರಿಹಾರಕ್ಕಾಗಿ ಗಂಡನನ್ನು ಕೊಂದು ಹುಲಿದಾಳಿ ಎಂದಿದ್ದ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪರಿಹಾರ ಮೊತ್ತ ಪಡೆಯುವುದಕ್ಕಾಗಿ ಪತಿಯನ್ನು ಹುಲಿ ದಾಳಿ ನಡೆಸಿ ಕೊಂದಿದೆ ಎಂದು ಕಥೆ ಕಟ್ಟಿದ ಚಲಾಕಿ ಪತ್ನಿ ಸಿಕ್ಕಿಬಿದ್ದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಿ, ಹುಲಿ ಅವನನ್ನು ಎಳೆದುಕೊಂಡು ಹೋಗಿದೆ ಎಂದು ಕಥೆ ಹೆಣೆದು, ಕಾಡು ಪ್ರಾಣಿಗಳ ದಾಳಿಗೆ ಬಲಿಯಾದ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾದ 15 ಲಕ್ಷ ರೂ. ಪರಿಹಾರ ಪಡೆಯಲು ಪ್ರಯತ್ನಿಸಿದ್ದಾರೆ.

ಮೈಸೂರಿನ ಹುಣಸೂರು ಗ್ರಾಮಾಂತರ ಪೊಲೀಸರು ಮಳವಳ್ಳಿ ತಾಲೂಕು ಕದಂಪುರ ಗ್ರಾಮದ ನಿವಾಸಿ ವೆಂಕಟಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ಸಲ್ಲಾಪುರಿ (40) ಯನ್ನು ಬಂಧಿಸಿದ್ದಾರೆ.

ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ ದೊರೆಯುವ 15 ಲಕ್ಷ ರೂ. ಪರಿಹಾರ ಮೊತ್ತ ಪಡೆಯಲು ಸಂಚು ರೂಪಿಸಿದ ಸಲ್ಲಾಪುರಿ, ಪತಿಯನ್ನು ಹತ್ಯೆಗೈದು ಹುಲಿ ಕೊಂದಿರುವ ಕಥೆ ಕಟ್ಟಿ ಪೊಲೀಸರನ್ನ ಯಾಮಾರಿಸಲು ಯತ್ನಿಸಿದ್ದಾಳೆ.

ಇದನ್ನೂ ಓದಿ