ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿದ್ದಕ್ಕೆ ಪತಿ ತಲಾಖ್ ನೀಡಿದ್ದಾನೆ.
ಉತ್ತರ ಪ್ರದೇಶದ ಬಹ್ರೈಚ್‌ನ 19 ವರ್ಷದ ವಿವಾಹಿತ ಮಹಿಳೆಯೊಬ್ಬರು ಪತಿಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಹೊಗಳಿದ್ದಕ್ಕೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಜೊತೆಗೆ ಬಿಸಿ ಸಾಂಬಾರ್‌ನ್ನು ಮುಖದ ಮೇಲೆ ಎರಚಿ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅತ್ತೆ, ಪತಿ ಕ್ರೂರವಾಗಿ ಹಿಂಸಿಸಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಆಕೆಯ ದೂರಿನ ಮೇರೆಗೆ ಆಕೆಯ ಪತಿ ಅರ್ಷದ್, ಇಬ್ಬರು ಸೋದರಳಿಯರಾದ ಫರ್ಹಾನ್ ಮತ್ತು ಶಫಾಫ್, ಸೊಸೆ ಸಿಮ್ರಾನ್, ಅತ್ತೆ ರೈಸಾ, ಮಾವ ಇಸ್ಲಾಂ, ಆಕೆಯ ಪತಿಯ ಸಹೋದರಿ ಕುಲ್ಸುಮ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.