ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲ್ಲೊಬ್ಬಳು ಮಡದಿ ಪತಿಯ ಈ ಕೆಟ್ಟ ಅಭ್ಯಾಸದಿಂದ ಬೇಸೆತ್ತು ಹೋಗಿದ್ದಾಳೆ. ಹೀಗಾಗಿ ಪತಿಯ ಈ ಕೆಟ್ಟ ಅಭ್ಯಾಸದ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಿದ್ದು, ಡಿವೋರ್ಸ್ ನೋಟಿಸ್ ಕಳಿಸ್ತೀನಿ ಎಂದು ಹೇಳಿದ್ದಾಳೆ.
ಹೌದು, ಪತಿಯ ಕೆಟ್ಟ ಅಭ್ಯಾಸಗಳಿಂದ, ಲೈಫ್‌ಸ್ಟೈಲ್‌ನಿಂದ ಪತ್ನಿ ಸುಸ್ತಾಗಿದ್ದು, ಒಟ್ಟಿಗೆ ಬಾಳೋಕೆ ಸಾಧ್ಯವೇ ಇಲ್ಲ ಎಂದು ನಿರ್ಧಾರ ಮಾಡಿದ್ದಾರೆ. ನೀನು ದಿನವೂ ಸ್ನಾನ ಮಾಡೋದಿಲ್ಲ, ನೀನು ಮೂರು ದಿನಗಳ ಕಾಲ ಒಂದೇ ಒಳ ಉಡುಪು ಧರಿಸ್ತೀಯ ಇದೆಲ್ಲ ನನಗೆ ಹಿಡಿಸೋದಿಲ್ಲ ಎಂದು ಪತ್ರವೊಂದನ್ನು ಬರೆದಿಟ್ಟು ಪತ್ನಿ ಮನೆ ಬಿಟ್ಟು ಹೋಗಿದ್ದಾರೆ.
ಪತಿಗೆ ವಿಚ್ಛೇದನ ಪತ್ರ ಬರೆದಿದ್ದು ಇದರಲ್ಲಿ ಪತ್ನಿಯು ಕೆಲವು ವಿಷಯಗಳನ್ನು ಉಲ್ಲೇಖಿಸಿರುವುದನ್ನು ಕಾಣಬಹುದು. ಈ ಪತ್ರದಲ್ಲಿ ಪ್ರಿಯ ಅಂಕಿತ್, ನೀನು ಅಯೋಗ್ಯ ಪ್ರೇಮಿ. ನಾನು ನಿನ್ನಿಂದ ಬೇಸತ್ತಿದ್ದೇನೆ. ನನಗೆ ಇನ್ನು ಮುಂದೆ ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಮದುವೆಯಲ್ಲಿ ನಾನು ಬದುಕಲು ಸಾಧ್ಯವಿಲ್ಲ. ನೀನು ಸ್ನಾನ ಮಾಡುವುದಿಲ್ಲ, ನೀನು ಮೂರು ದಿನಗಳವರೆಗೆ ಅದೇ ಒಳ ಉಡುಪು ಧರಿಸುತ್ತೀಯ. ನೀನು ತಪ್ಪಾಗಿ ಸ್ನಾನ ಮಾಡಿದ ದಿನ, ನೀನು ಟವೆಲ್ ಮತ್ತು ಹಾಸಿಗೆಯನ್ನು ಎಸೆಯುತ್ತೀಯ, ಹಣಕ್ಕೆ ಯಾವುದೇ ಮೌಲ್ಯವಿಲ್ಲ, ನೀನು 80 ಸಾವಿರ ಮೌಲ್ಯದ ಏನೂ ಇಲ್ಲದ ಫೋನ್ ಖರೀದಿಸಿದೆ. ಅದಕ್ಕೆ ಹೆಸರಿಲ್ಲ, ಅದು ಯಾವುದೇ ವೈಶಿಷ್ಟ್ಯಗಳನ್ನು ನೀಡುವುದಿಲ್ಲ. ನೀನು ಫ್ಲಶ್ ಕೂಡ ಮಾಡುವುದಿಲ್ಲ. ನನ್ನ ವಕೀಲರು ನಿಮಗೆ ವಿಚ್ಛೇದನ ಪತ್ರಗಳನ್ನು ಕಳುಹಿಸುತ್ತಾರೆ. ಶುಭವಾಗಲಿ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗಿದ್ದು, ಪರ-ವಿರೋಧ ಕಮೆಂಟ್ಸ್ ಬೀಳುತ್ತಿದೆ.