ತವರಿಗೆ ಹೋದ ಹೆಂಡತಿ: ಪ್ರಯಾಣಿಕರಿಗೆ ಬಿಸ್ಕೆಟ್ ಹಂಚಿ ಸಂಭ್ರಮಿಸಿದ ಆಟೋ ಚಾಲಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೆಂಡತಿ ಮನೆಯಿಂದ ತವರಿಗೆ ಹೋದಾಗ ಗಂಡನಿಗೆ ಸ್ವಾತಂತ್ರ್ಯ ಸಿಕ್ಕಿದಷ್ಟೇ ಖುಷಿ ಆಗುತ್ತದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಇಲ್ಲೊಬ್ಬ ಆಟೋ ಡ್ರೈವರ್ ನನ್ನ ಹೆಂಡತಿ ಊರಿಗೆ ಹೋಗಿದ್ದು, ನನಗೆ ತುಂಬಾ ಖುಷಿಯಾಗಿದೆ.

ಈತ ಖುಷಿ ಹಂಚಿಕೊಳ್ಳುವುದಕ್ಕೆ ನಾನು ಎಲ್ಲರಿಗೂ ಬಿಸ್ಕೆಟ್ ಹಂಚುತ್ತಿದ್ದೇನೆ. ನೀವೂ ಬಿಸ್ಕೆಟ್ ತಿನ್ನಿ ಎಂದು ಆಟೋ ಚಾಲಕ ಬೋರ್ಡ್ ಹಾಕಿ ಸಂತಸಪಟ್ಟಿದ್ದಾನೆ.

ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ.

ಬೆಂಗಳೂರು ಆಟೋ ಚಾಲಕ ತನ್ನ ಹೆಂಡತಿ ಊರಿಗೆ ಹೋಗಿದ್ದಾಳೆ. ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಫಲಕವನ್ನು ಹಾಕಿಕೊಂಡು ಆಟೋ ಪ್ರಯಾಣಿಕರಿಗೆ ಕಾಣಿಸುವಂತೆ ಪ್ರದರ್ಶನ ಮಾಡಿದ್ದಾನೆ. ಜೊತೆಗೆ, ತನ್ನ ಸಂತೋಷದಲ್ಲಿ ನೀವು ಭಾಗಿಯಾಗಬೇಕು ಎಂದೆನಿಸಿದರೆ ನೀವು ಈ ಬಿಸ್ಕೆಟ್ ತಿಂದು ಖುಷಿಪಡಿ ಎಂದು ಬಿಸ್ಕೆಟ್ ಇಟ್ಟಿದ್ದಾನೆ.

ಬೆಂಗಳೂರಿನ ಆಟೋ ಚಾಲಕನ ವಿಚಾರ ಸೋಷಿಯಲ್ ಮೀಡಿಯಾದ ತುಂಬೆಲ್ಲ ಹರಿದಾಡುತ್ತಿದೆ. ತನ್ನ ಹೆಂಡತಿ ತವರು ಮನೆಗೆ ಹೋದ ಖುಷಿಯನ್ನು ಆಟೋ ಡ್ರೈವರ್ ಗಂಡ ಊರ ತುಂಬೆಲ್ಲಾ ಡಂಗೂರ ಸಾರುವುದಕ್ಕೆ ಈ ರೀತಿ ಉಪಾಯ ಮಾಡಿದ್ದಾನೆ. ತನ್ನ ಆಟೋದಲ್ಲಿ ಫಲಕ ಹಾಕಿದ್ದನ್ನು ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕನೊಬ್ಬ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಇನ್ನು ಆಟೋ ಚಾಲಕ ಹಿಂಬದಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕಾಣಿಸುವಂತೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮುದ್ರಣ ಮಾಡಿ ಅದಕ್ಕೆ ಲ್ಯಾಮಿನೇಷನ್ ಮಾಡಿಸಿದ ಫಲಕದ ರೀತಿಯಲ್ಲಿ ತೂಗು ಹಾಕಿದ್ದಾನೆ. ಇದರಲ್ಲಿ ‘ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ’ ಎಂದು ಬರೆದಿದ್ದಾನೆ. ಆಟೋ ಪ್ರಯಾಣಿಕರಿಗೆ ಬ್ರಿಟಾನಿಯಾ ಮಿಲ್ಕ್ ಬಿಸ್ಕೆಟ್‌ಗಳನ್ನು ಕೊಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದೇ ಆಟೋ ಡ್ರೈವರ್‌ಗೆ ನಿಜವಾದ ‘ಸ್ವಾತಂತ್ರ್ಯ’ಎಂದು ಕರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!