ಸುಂಟಿಕೊಪ್ಪ ಬಳಿಯ ತೋಟದಲ್ಲಿ ಕಾಡಾನೆ ಕಳೇಬರ ಪತ್ತೆ, ಕದನದಿಂದ ಸಾವು?

ಹೊಸದಿಗಂತ ವರದಿ ಸುಂಟಿಕೊಪ್ಪ(ಕೊಡಗು):

ಇಲ್ಲಿಗೆ ಸಮೀಪದ ಕಂಬಿಬಾಣೆಯಲ್ಲಿ ಕಾಡಾನೆಯೊಂದರ ಕಳೇಬರ ಪತ್ತೆಯಾಗಿದೆ.
ಕಂಬಿಬಾಣೆ ಊರುಗುಪ್ಪೆ ಪೈಸಾರಿ ಸಮೀಪದ ತೋಟವೊಂದರಲ್ಲಿ ಗುರುವಾರ ಸುಮಾರು 18 ವರ್ಷ ಪ್ರಾಯದ ಹೆಣ್ಣಾನೆ ಕಳೇಬರ ಕಂಡುಬಂದಿದೆ.

ಬುಧವಾರ ರಾತ್ರಿ ನಡೆದ ಕಾಡಾನೆಗಳ ನಡುವಿನ ಕದನದಲ್ಲಿ ಆನೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಮಡಿಕೇರಿ ಡಿಸಿಎಫ್‌ ಹರ್ಷವರ್ಧನ ,ಕುಶಾಲನಗರ ಎಸಿಎಫ್‌ ಗೋಪಾಲ್‌, ಆರ್‌.ಎಫ್‌ ಒ ರತನ್‌ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕಳೇಬರದ ಮರಣೋತ್ತರ ಪರೀಕ್ಷೆಯ ಬಳಿಕ ದಫನ ಮಾಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!