ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಅರಣ್ಯ ಇಲಾಖೆಗೆ ಸೇರಿದ್ದ ಜೀಪಿನ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.
ಕಳೆದ ಒಂದು ವಾರದಲ್ಲಿ ವಯನಾಡಿನಲ್ಲಿ ವನ್ಯಜೀವಿ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಹರತಾಳಕ್ಕೆ ಕರೆ ನೀಡಿದ್ದವು.
ಈ ವೇಳೆ ಪುಲ್ಪಳ್ಳಿಯಲ್ಲಿ ಪ್ರತಿಭಟನಾಕಾರರು ಅರಣ್ಯ ಇಲಾಖೆ ಜೀಪನ್ನು ನಜ್ಜುಗುಜ್ಜಾಗಿಸಿದ್ದಾರೆ. ಜೊತೆಗೆ ಹುಲಿ ಕೊಂದಿರುವ ಹಸುವಿನ ಕಳೇಬರವನ್ನು ಅರಣ್ಯ ಇಲಾಖೆ ಜೀಪಿಗೆ ಕಟ್ಟಿದ್ದಾರೆ.
ಕಾಡಾನೆ ದಾಳಿಗೆ ಬಲಿಯಾದ ಅಜೀಶ್ ಎನ್ನುವವರ ಮೃತದೇಹವನ್ನು ಬಸ್‌ಸ್ಟಾಂಡ್‌ನಲ್ಲಿ ಇರಿಸಿಕೊಂಡು ಇನ್ನೊಂದಿಷ್ಟು ಪ್ರತಿಭಟನಾಕಾರರು ಕುಳಿತಿದ್ದಾರೆ.