ಮತ್ತೆ ಕಿರುತೆರೆಗೆ ಬರ್ತಾರಾ ಬಿಜೆಪಿ ನಾಯಕಿ ಸ್ಮೃತಿ ಇರಾನಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ನಾಯಕಿ, ನಟಿ ಸ್ಮೃತಿ ಇರಾನಿ ಅವರು ಸುದೀರ್ಘ ವಿರಾಮದ ಬಳಿಕ ಮತ್ತೆ ನಟನೆಗೆ ಮರಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಅದಕ್ಕೆ ಕಾರಣ ಬಹುನಿರೀಕ್ಷಿತ ಸೀಕ್ವೆಲ್​ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2’ ಸೀರಿಯಲ್ .

‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರವಾಹಿಯಲ್ಲಿ ತುಳಸಿ ವಿರಾನಿ ಮತ್ತು ಹಿಂದಿನ ಟೆಲಿವಿಶನ್​​ ಪ್ರಾಜೆಕ್ಟ್​ಗಳ ಕವಿತಾ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಸ್ಮೃತಿ ಇರಾನಿ, 2000ರ ದಶಕದ ಆರಂಭದಲ್ಲಿ ಭಾರತೀಯ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಇದೀಗ ಬಹುನಿರೀಕ್ಷಿತ ಸೀಕ್ವೆಲ್​ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2’ಯೊಂದಿಗೆ ಮನರಂಜನಾ ಕ್ಷೇತ್ರದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್‌ ಶುರು ಮಾಡಲು ಸಜ್ಜಾಗುತ್ತಿದ್ದಾರೆಂದು ಮಾತು ಗಳು ಕೇಳಿಬರುತ್ತಿದೆ.

ರಾಜಕೀಯ ಪ್ರವೇಶದ ನಂತರ ದೂರದರ್ಶನದಿಂದ ದೂರ ಉಳಿದಿದ್ದ ಸ್ಮೃತಿ ಇರಾನಿ ಇದೀಗ ನಟನೆಗೆ ಮರಳುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮೊದಲ ಭಾಗದಲ್ಲಿ ತುಳಸಿ ಅವರ ಪತಿ ಮಿಹಿರ್ ಪಾತ್ರ ನಿರ್ವಹಿಸಿದ್ದ ನಟ ಅಮರ್ ಉಪಾಧ್ಯಾಯ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆಂಬುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

2013 ರಲ್ಲಿ ಕೊನೆಯ ಬಾರಿಗೆ ಸ್ಮೃತಿ ಇರಾನಿ ಧಾರಾವಾಹಿಯೊಂದರಲ್ಲಿ ನಟಿಸಿದ್ದರು. ಆ ಬಳಿಕ ಅವರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು. ರಾಜಕೀಯದಲ್ಲಿಯೂ ಸಹ ಅವರಿಗೆ ಗೆಲುವಿನ ಮೇಲೆ ಗೆಲುವು, ಯಶಸ್ಸು ಧಕ್ಕುತ್ತಾ ಸಾಗಿ ಎರಡು ಅವಧಿಗೆ ಕೇಂದ್ರ ಮಂತ್ರಿಯೂ ಆದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿ ಸೋತಿರುವ ಸ್ಮೃತಿ ಇರಾನಿ ಇದೀಗ ಮತ್ತೆ ಮನರಂಜನಾ ಕ್ಷೇತ್ರದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್‌ ಶುರು ಮಾಡಲು ಸಜ್ಜಾಗುತ್ತಿದ್ದಾರೆಂದು ಮಾತು ಗಳು ಕೇಳಿಬರುತ್ತಿದೆ.

ಇರಾನಿ ಅಥವಾ ಉಪಾಧ್ಯಾಯ ಇಬ್ಬರೂ ಅಧಿಕೃತವಾಗಿ ಈ ಬಗ್ಗೆ ಘೋಷಿಸಿಲ್ಲವಾದರೂ, ಹೊಸ ಕಥಾಹಂದರದೊಂದಿಗೆ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮರಳುವಿಕೆ ಈಗಾಗಲೇ ಭಾರತೀಯ ದೂರದರ್ಶನ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.ಐಕಾನಿಕ್ ಜೋಡಿ ತೆರೆಮೇಲೆ ಮತ್ತೆ ಅದೇ ಮ್ಯಾಜಿಕ್ ಮಾಡ್ತಾರಾ ಎಂಬುದನ್ನು ನೋಡಲು ಫ್ಯಾನ್ಸ್​ ಕಾತರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!