ಕ್ಷಮೆ ಕೇಳದಿದ್ರೆ ಮಾನನಷ್ಟ ಮೊಕದ್ದಮೆ ಹೂಡ್ತೇನೆ, ನಿರ್ಮಾಪಕರಿಗೆ ಸುದೀಪ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ಮಾಪಕರಾದ ಎಂ.ಎನ್. ಸುರೇಶ್ ಹಾಗೂ ಎಂ.ಎನ್. ಕುಮಾರ್ ನಟ ಕಿಚ್ಚ ಸುದೀಪ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದು, ಸುದೀಪ್ ಲೀಗಲ್ ನೋಟಿಸ್ ಮೂಲಕ ಇದಕ್ಕೆ ಉತ್ತರ ನೀಡಿದ್ದಾರೆ.

ಸುದೀಪ್ ನಮ್ಮಿಂದ ಎಂಟು ಕೋಟಿ ಹಣ ಪಡೆದಿದ್ದಾರೆ, ಎರಡು ವರ್ಷವಾದ್ರೂ ಸಿನಿಮಾಗೆ ಡೇಟ್ ಕೊಡ್ತಿಲ್ಲ. ವಿಕ್ರಾಂತ್ ರೋಣ ಕೂಡ ನಾವೇ ನಿರ್ಮಾಣ ಮಾಡಬೇಕಿತ್ತು, ಅದನ್ನೂ ಸುದೀಪ್ ಕಿತ್ತುಕೊಂಡಿದ್ದಾರೆ. ನಾವು ಕೊಟ್ಟ ಹಣ ಬಳಸಿ ಸುದೀಪ್ ಆರ್‌ಆರ್ ನಗರದಲ್ಲಿ ಮನೆ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಅದಕ್ಕೆ ಸುದೀಪ್ ಲೀಗಲಿ ಉತ್ತರ ನೀಡಿದ್ದು, ವಕೀಲರಿಂದ ನೊಟೀಸ್ ಕಳುಹಿಸಿದ್ದಾರೆ. ಎಲ್ಲಾ ಆರೋಪಗಳು ಸುಳ್ಳು, ಆಧಾರರಹಿತ, ಕ್ಷಮೆ ಕೋರದಿದ್ರೆ 10 ಕೋಟಿ ರೂಪಾಯಿ ಮಾನನಷ್ಟು ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!