ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎಂಬ ಮತ್ತೊಂದನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕೈಫ್, “ಬುಮ್ರಾ ಇಲ್ಲದ ಟೆಸ್ಟ್ ಪಂದ್ಯಗಳಿಗೆ ಭಾರತೀಯ ಅಭಿಮಾನಿಗಳು ಈಗಾಗಲೇ ಮಾನಸಿಕವಾಗಿ ಸಿದ್ಧರಾಗಬೇಕು” ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ ವರ್ಕ್‌ಲೋಡ್ ಪರಿಗಣಿಸಿ ಕೇವಲ ಮೂರು ಟೆಸ್ಟ್‌ಗಳಿಗೆ ಮಾತ್ರ ಆಟವಾಡಲಿದ್ದಾರೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದರು. ಅವರು ಮೊದಲ, ಮೂರನೇ ಹಾಗೂ ಇದೀಗ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ಗಳಲ್ಲಿ ಭಾಗಿಯಾಗಿದ್ದು, ಮೂರನೇ ದಿನದ ಕೊನೆ ಓವರ್‌ಗಳಲ್ಲಿ ಬುಮ್ರಾ ಎಸೆತಗಳ ವೇಗ 130 ಕಿಮೀಗಿಂತ ಕಡಿಮೆಯಿತ್ತು.
ಬುಮ್ರಾ ಈಗಾಗಲೇ ತನ್ನ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಅಪಾರ ಶ್ರಮ ಹಾಕುತ್ತಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ವೇಗ ಕುಸಿತ ಹಾಗೂ ದಣಿವಿನ ಲಕ್ಷಣಗಳು ಸ್ಪಷ್ಟವಾಗಿವೆ. ಮೊದಲ ಬಾರಿಗೆ ಟೆಸ್ಟ್ ಇತಿಹಾಸದಲ್ಲಿ ಬುಮ್ರಾ ಒಂದೇ ಇನ್ನಿಂಗ್ಸ್‌ನಲ್ಲಿ 100ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಅವರು 33 ಓವರ್‌ಗಳಲ್ಲಿ 5 ಮೇಡನ್ ಸಹಿತ 112 ರನ್ ನೀಡಿ ಕೇವಲ 2 ವಿಕೆಟ್‌ಗಳನ್ನೇ ಪಡೆದಿದ್ದಾರೆ.
ಮುಂಬೈ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ 99 ರನ್‌ಗಳು ಗರಿಷ್ಠವಾಗಿದ್ದರೆ, ಈ ಮೊತ್ತ ದಾಟಿರುವುದು ಬುಮ್ರಾ ಶಕ್ತಿಶಾಲಿ ಬೌಲಿಂಗ್ ಶೈಲಿಗೆ ಹೊರೆ ಆಗುತ್ತಿದೆ ಎಂಬ ಸಂಕೇತ ನೀಡುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನೂರು ಪ್ರತಿಶತ ನೀಡುವ ಸಾಮರ್ಥ್ಯ ಇಲ್ಲದಿದ್ದರೆ, ಅವರು ಸ್ವತಃ ನಿವೃತ್ತಿಯನ್ನು ಆಯ್ಕೆ ಮಾಡಬಹುದೆಂಬ ಸಂದೇಶವನ್ನು ಕೈಫ್ ನೀಡಿದ್ದಾರೆ.