ಈ ಬಾರಿಯ ಬಿಗ್‌ಬಾಸ್ ಸೀಸನ್ ನಿರೂಪಣೆ ಮಾಡ್ತಾರಾ ಕಿಚ್ಚ ಸುದೀಪ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ ೧೨ ಸೀಸನ್‌ ಆರಂಭಕ್ಕೆ ಸಜ್ಜಾಗಿದ್ದು,ಇನ್ನು 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಈ ಕಾರ್ಯಕ್ರಮದ ಏಕಮಾತ್ರ ನಿರೂಪಕ ಕಿಚ್ಚ ಸುದೀಪ್ 11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು.

ಇದೀಗ ಬಿಗ್‌ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಆ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಮಾಡಿದೆ ಎನ್ನಲಾಗುತ್ತಿದೆ.

ಈ ಬಾರಿಯ ಬಿಗ್‌ಬಾಸ್ ಶೋ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿಯನ್ನ ಕರೆಯಲಾಗಿದೆ. ಇದೇ ಜೂನ್ 30ರಂದು ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲು ಆಯೋಜಕರು ಹಾಗೂ ಕಲರ್ಸ್‌ ತಂಡ ಸಜ್ಜಾಗಿದೆ.

ಬಿಗ್‌ಬಾಸ್ ಸೀಸನ್-12ರ ನಿರೂಪಣೆಯನ್ನ ಯಾರು ಮಾಡುತ್ತಾರೆ ಅನ್ನೋದು ಈಗಲೂ ಕೂಡಾ ಪ್ರಶ್ನೆಯಾಗಿ ಕಾಡುತ್ತಿದೆ. ಈ ವಿಚಾರವಾಗಿ ನಟ ಸುದೀಪ್ ಅವರನ್ನ ರಿಯಾಲಿಟಿ ಶೋಗೆ ನಿರೂಪಕರಾಗಿ ಮುಂದುವರೆಯುವಂತೆ ಮನವೊಲಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆಯಂತೆ. ಅಲ್ಲದೇ ಕಿಚ್ಚ ಸುದೀಪ್ ಅವರು ಕೂಡಾ ಕೆಲವು ಷರತ್ತುಗಳನ್ನ ಹಾಕಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಜೂನ್ 30 ಸೋಮವಾರದಂದು ನಡೆಯುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!