ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡೋದಕ್ಕೆ ಹಣ ಪಡೆಯುವ ವಿಷಯ ಗೊತ್ತಿರುವಂಥದ್ದೇ. ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಭಾರತದಲ್ಲಿ ಪ್ರತಿ ಪೋಸ್ಟ್‌ಗೆ ಅತಿ ಹೆಚ್ಚು ಸಂಭವಾನೆ ಪಡೆಯುತ್ತಾರೆ.
ವಿರಾಟ್ ಒಂದು ಪೋಸ್ಟ್‌ಗೆ ಇನ್ಸ್ಟಾಗ್ರಾಂ 11.45 ಕೋಟಿ ರೂಪಾಯಿ ನೀಡುತ್ತದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ವಿರಾಟ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಈ ಜೀವನದಲ್ಲಿ ಏನೆಲ್ಲಾ ಪಡೆದಿದ್ದೀನೋ ಅದಕ್ಕೆ ಕೃತಜ್ಞನಾಗಿದ್ದೇನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಾನು 11.45 ಕೋಟಿ ಪಡೆಯುತ್ತಿದ್ದೇನೆ ಎಂದು ವೈರಲ್ ಆಗಿರುವ ಸುದ್ದಿ ನಿಜವಲ್ಲ ಎಂದು ವಿರಾಟ್ ಹೇಳಿದ್ದಾರೆ.