ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಕಚೇರಿಯಲ್ಲಿ ವರ್ಗಾವಣೆಗೆ 30 ಲಕ್ಷ ರೂಪಾಯಿ ಕೇಳ್ತಾರೆ ಎಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ, ಸೋಲು ಅನುಭವಿಸಿ ಎಚ್ಡಿಕೆ ಏನೇನೋ ಮಾತಾಡ್ತಿದ್ದಾರೆ ಪಾಪಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದರು.
ಇದೇ ವಿಷಯ ಇದೀಗ ಮತ್ತೆ ಮುಂದುವರಿದಿದ್ದು, ಡಿಕೆಶಿ ಒಡೆತನದ ಲುಲು ಮಾಲ್ ಬಗ್ಗೆ ಎಚ್ಡಿಕೆ ಮಾತನಾಡಿದ್ದಾರೆ. ಹೊಲ ಉತ್ತಿ, ಬೀಜ ಬಿತ್ತಿ, ಬೆವರಿನ ಹೊಳೆ ಹರಿಸಿ ಫಸಲು ತೆಗೆದು ಡಿಕೆಶಿ ಲುಲು ಮಾಲ್ ಕಟ್ಟಿದ್ದಾರೆ. ಇದೇ ಕೆಲಸವನ್ನು ಸಾಕಷ್ಟು ರೈತರು ಮಾಡ್ತಿದ್ದಾರೆ. ಆದರೆ ಅವರಿಗೆ ಲುಲು ಮಾಲ್ ಕಟ್ಟೋಕಾಗಿಲ್ಲ. ಕಷ್ಟಪಟ್ಟು ನೀವು ಲುಲು ಮಾಲ್ ಕಟ್ಟಿದ್ದೇ ಆದರೆ ನಿಮಗಿಂತ ದೊಡ್ಡ ಎಕಾನಮಿಸ್ಟ್ ಮತ್ತೊಬ್ಬರಿಲ್ಲ, ನಿಮ್ಮನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ವಾ? ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.