March 25, 2026
Wednesday, March 25, 2026
spot_img

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ತಮಿಳುನಾಡು ರಾಜಕೀಯ ಅಖಾಡದಿಂದ ಹಿಂದೆ ಸರಿದ ಕಮಲ್ ಹಾಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನ ಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಈಗಾಗಲೇ ಘಟಾನುಘಟಿಗಳು ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ನಟ,ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಮ್ ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿದೆ.

ಡಿಎಂಕೆ ಜೊತೆಗಿನ ಮೈತ್ರಿ ವೇಳೆ ಸೀಟು ಹಂಚಿಕೆ ವಿಚಾರದಲ್ಲಿ ಸರಿಯಾದ ಒಮ್ಮತ ನಿರ್ಧಾರ ಬಾರದ ಕಾರಣ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ.

ಈ ಕುರಿತು ಮಾತನಾಡಿದ ಕಮಲ್ ಹಾಸನ್, ಸೀಟು ಹಂಚಿಕೆ ವಿಚಾರದ ಕುರಿತು ಮಾತುಕತೆ ವೇಳೆ ಡಿಎಂಕೆ ಪಾರ್ಟಿ ತಮ್ಮ ಚಿಹ್ನೆ ಉದಯಿಸುತ್ತಿರುವ ಸೂರ್ಯದಡಿ ಸ್ಪರ್ಧಿಸಲು ಪ್ರಸ್ತಾಪ ಇಟ್ಟಿದ್ದು, ಆದರೆ ಈ ಬಾರಿ ತಮ್ಮದೇ ಮಕ್ಕಳ್ ನೀಧಿ ಮಯ್ಯಮ್ ಪಕ್ಷದಲ್ಲಿ ಚುನಾವಣೆ ಎದುರಿಸಬೇಕೆಂಬ ಅಸೆ ಹೊಂದಿದ್ದೇವು. ಆದರೆ ಡಿಎಂಕೆ ನೀಡಿದ ಸಲಹೆ ಹಾಗೂ ಸೀಟು ವಿಚಾರದಲ್ಲಿ ಒಮ್ಮತ ನಿರ್ಧಾರ ಬಾರದ ಕಾರಣ ಈ ಬಾರಿ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಡಿಎಂಕೆ ನೇತೃತ್ವದ ಮೈತ್ರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !