Friday, January 23, 2026
Friday, January 23, 2026
spot_img

ರಾಮ್‌ ಜಿ ಕಾಯ್ದೆ ವಿರುದ್ಧ ಬಜೆಟ್‌ ಅಧಿವೇಶನದಲ್ಲಿ ಧ್ವನಿ ಎತ್ತುವೆ: ಮಲ್ಲಿಕಾರ್ಜುನ ಖರ್ಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಿ ರಾಮ್‌ ಜಿ ಕಾಯ್ದೆ ಜಾರಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ ಮುಂದುವರೆದಿದ್ದು, ಬಜೆಟ್‌ ಅಧಿವೇಶನದಲ್ಲಿ ಇದರ ಧ್ವನಿ ಎತ್ತುವುದಾಗಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್‌ ಆಯೋಜಿಸಿದ್ದ ರಾಷ್ಟ್ರೀಯ ಮನರೇಗಾ ಕಾರ್ಮಿಕರ ಸಮಾವೇಶ ಉದ್ದೇಶಿಸಿ ಮಾತನಾಡಿದ ಖರ್ಗೆ, ‘ನರೇಗಾ ಹೆಸರನ್ನು ಸಾರ್ವಜನಿಕರಿಂದ ತೆಗೆದುಹಾಕಿ, ಗ್ರಾಮ ಸ್ವರಾಜ್ಯ ದುರ್ಬಲಗೊಳಿಸಿವುದು ಕೇಂದ್ರದ ಗುರಿ, ಇದರ ವಿರುದ್ಧ ಬಜೆಟ್‌ ಅಧಿವೇಶನದಲ್ಲಿ ನಾವು ಹೋರಾಡುತ್ತೇವೆ’ ಎಂದು ಹೇಳಿದರು.

ಮತಗಳನ್ನು ಪಡೆಯಲು ಮೋದಿಯವರು ತಾನು ಚಹಾ ಮಾರುವವನು ಎಂದು ಹೇಳುತ್ತಲೇ ಇರುತ್ತಾರೆ. ಅವರು ಎಂದಾದರೂ ಚಹಾ ಮಾಡಿದ್ದಾರೆಯೇ? ಜನರಿಗೆ ಚಹಾ ನೀಡಲು ಎಂದಾದರೂ ಕೆಟಲ್ ಹಿಡಿದು ತಿರುಗಾಡಿದ್ದಾರೆಯೇ? ಇದೆಲ್ಲವೂ ಕೇವಲ ನಾಟಕ. ಬಡವರನ್ನು ದಮನಿಸುವುದು ಮೋದಿಯವರ ಅಭ್ಯಾಸ’ ಎಂದಿದ್ದಾರೆ.

ಇನ್ನು ಇದೇ ವಿಚಾರದ ಬಗ್ಗೆ ರಾಹುಲ್‌ ಗಾಂಧಿ ಮಾತನಾಡಿ, ‘ಈ ಹಿಂದೆ ಮೋದಿ ಜಾರಿ ಮಾಡಿದ್ದ 3 ಕರಾಳ ಕೃಷಿ ಕಾನೂನು ಮತ್ತು ಮನರೇಗಾ ರದ್ದತಿ ಹಿಂದಿನ ಉದ್ದೇಶ ಒಂದೇ ಆಗಿವೆ. ಅನ್ನದಾತರ ವಿಚಾರದಲ್ಲಿ ಮಾಡಿದಂತೆ ಈಗ ಕಾರ್ಮಿಕರಿಗೂ ಮಾಡುತ್ತಿದ್ದಾರೆ. ಅವರು (ಬಿಜೆಪಿ) ಆಸ್ತಿಗಳು ಕೆಲವೇ ಜನರ ಕೈಯಲ್ಲಿರಬೇಕೆಂದು ಬಯಸುತ್ತಾರೆ. ಇದರಿಂದ ಬಡವರು ಅದಾನಿ- ಅಂಬಾನಿ ಮೇಲೆ ಅವಲಂಬಿತರಾಗುತ್ತಾರೆ, ಅದು ಅವರ ಭಾರತದ ಮಾದರಿ’ ಎಂದು ಕಿಡಿಕಾರಿದರು.

Must Read