ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರತದ ಯಾವುದೇ ಮಿಲಿಟರಿ ದುಸ್ಸಾಹಸಕ್ಕೆ ಮುಂದಾದರೆ ಪಶ್ಚಾತ್ತಾಪ ಪಡುವಂತೆ ‘ತ್ವರಿತ, ದೃಢ ಪ್ರತಿಕ್ರಿಯೆ’ ನೀಡುತ್ತೇವೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಗುರುವಾರ ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಬಂಕರ್ ನಲ್ಲಿ ಅವಿತಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದ ಮುನೀರ್ ಗುರುವಾರ ಭಾರತದ ಯಾವುದೇ ‘ಮಿಲಿಟರಿ ದುಸ್ಸಾಹಸ’ಕ್ಕೆ ‘ತ್ವರಿತ, ದೃಢ ಮತ್ತು ನಾಚ್-ಅಪ್ ಪ್ರತಿಕ್ರಿಯೆ’ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ್ದು ಯಾವುದೇ ಕ್ಷಣದಲ್ಲೂ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು. ಸೇನಾ ದಾಳಿ ಮೂಲಕ ಭಾರತ ಪ್ರತೀಕಾರ ತೀರಿಸಿಕತೊಳ್ಳಲಿದೆ ಎಂದು ಪಾಕಿಸ್ತಾನ ಸರ್ಕಾರ ಆತಂಕ ವ್ಯಕ್ತಪಡಿಸುತ್ತಲೇ ಇದೆ. ಇದೇ ವಿಚಾರವಾಗಿ , ಭಾರತ ಪಾಕ್ ಮೇಲೆ ಯಾವುದೇ ‘ಮಿಲಿಟರಿ ದುಸ್ಸಾಹಸ’ಕ್ಕೆ ಮುಂದಾದರೆ ಪಶ್ಚಾತ್ತಾಪ ಪಡುವಂತೆ ‘ತ್ವರಿತ, ದೃಢ ಪ್ರತಿಕ್ರಿಯೆ’ ನೀಡುತ್ತೇವೆ. ಪಾಕಿಸ್ತಾನವು ಪ್ರಾದೇಶಿಕ ಶಾಂತಿಗೆ ಬದ್ಧವಾಗಿದ್ದರೂ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ನಮ್ಮ ಸನ್ನದ್ಧತೆ ಮತ್ತು ಸಂಕಲ್ಪವಾಗಿದೆ’ ಎಂದು ಹೇಳಿದರು ಎಂದು ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ (APP) ಉಲ್ಲೇಖಿಸಿ ವರದಿ ಮಾಡಿದೆ.