ಡಿಸೆಂಬರ್‌ ನಲ್ಲಿ ಹಸೆಮಣೆಯೇರಲಿದ್ದಾರಾ ʼಶೇರ್‌ ಶಾʼ ಜೋಡಿ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ʼಶೇರ್‌ ಶಾʼ ಚಿತ್ರದ ನಂತರ ಡೇಟಿಂಗ್ನಲ್ಲಿದ್ದಾರೆ ಎಂದು ವದಂತಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿಯವರ ಕ್ಯೂಟ್‌ ಜೋಡಿ ಡಿಸೆಂಬರ್‌ ನಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಬಿ ಟೌನ್‌ ಅಂಗಳದಲ್ಲಿ ಹರಿದಾಡುತ್ತಿವೆ. ಡೇಟಿಂಗ್‌ ವದಂತಿಗಳನ್ನು ಈ ಜೋಡಿ ಖಚಿತಪಡಿಸಿಲ್ಲವಾದರೂ ತಾವಿಬ್ಬರು ಸ್ನೇಹಿತರಿಗಿಂತ ಹೆಚ್ಚು ಎಂಬ ಸುಳಿವು ನೀಡಿದ್ದಾರೆ ಎನ್ನಲಾಗಿದ್ದು ಇದೀಗ ಜೀವನ ಬಾಂಧವ್ಯ ಬೆಸೆಯಲು ಸಜ್ಜಾಗಿದ್ದಾರಾ ಎಂಬ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿದೆ.

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮದುವೆಗಾಗಿ ಡಿಸೆಂಬರ್‌ನಲ್ಲಿ ದಿನಾಂಕವನ್ನು ಲಾಕ್ ಮಾಡಿದ್ದಾರೆ. ಮದುವೆಯ ವಿಚಾರದ ಬಗ್ಗೆ ಜೋಡಿ ಸುಳಿವು ನೀಡಿದ್ದು ವಿವಾಹ ಸಮಾರಂಭದದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಕರಣ್ ಜೋಹರ್ ಪಾಲ್ಗೊಳ್ಳುವಿಕೆಯೊಂದಿಗೆ ಮುಂಬೈನಲ್ಲಿ ಆರತಕ್ಷತೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಒಮ್ಮೆ ಎಲ್ಲವೂ ಸಿದ್ಧವಾದ ನಂತರ ಮತ್ತು ದಂಪತಿಗಳು ತಮ್ಮ ಪೂರ್ವಸಿದ್ಧತಾ ಕಾರ್ಯವನ್ನು ಪೂರ್ಣಗೊಳಿಸಿದ ನಂತರ ಅವರು ತಮ್ಮ ಮದುವೆಯನ್ನು ಅಧಿಕೃತವಾಗಿ ಘೋಷಿಸುತ್ತಾರೆ. ಆದರೆ ಅಲ್ಲಿಯವರೆಗೆ ಅವರು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಎನ್ನಲಾಗುತ್ತಿದ್ದು ಕಾಕತಾಳೀಯವಾಗಿ, ಶಾಹಿದ್ ಕಪೂರ್ ಅವರೊಂದಿಗೆ ಕಿಯಾರಾ ಅಡ್ವಾಣಿ ಕಾಫಿ ವಿತ್ ಕರಣ್ ಸೀಸನ್ 7 ನಲ್ಲಿ ಕಾಣಿಸಿಕೊಂಡಾಗ ಡಿಸೆಂಬರ್‌ನಲ್ಲಿ ಮದುವೆಯ ಬಗ್ಗೆ ಸುಳಿವು ನೀಡಿದ್ದರು.‌ ಇಬ್ಬರೂ ನೋಂದಾಯಿತ ವಿವಾಹವನ್ನು ಆರಿಸಿಕೊಳ್ಳುತ್ತಾರೆ ಮತ್ತು ನಂತರ ಅವರ ಸಂಬಂಧಿಕರಿಗೆ ಕಾಕ್ಟೈಲ್ ಪಾರ್ಟಿಯನ್ನು ಏರ್ಪಡಿಸುತ್ತಾರೆ ಎಂದು ರೂಮರ್‌ ಗಳು ಹರಿದಾಡುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!