ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಕಾಲ ಇದಾಗಿದೆ. ರಶ್ಮಿಕಾ ಅಭಿನಯದ ಪುಷ್ಪಾ-2 ಹಾಗೂ ಛಾವಾ ಅತ್ಯುತ್ತಮ ಕಲೆಕ್ಷನ್ಸ್ ಮಾಡಿದೆ. ಇದೀಗ ಸಲ್ಮಾನ್ ಖಾನ್ ಜೊತೆ ನಟಿಸಿರುವ ಸಿಖಂದರ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಮಾಹಿತಿ..
ನಿನ್ನೆ ಭಾನುವಾರವಾಗಿದ್ದರೂ ಯುಗಾದಿ ಹಬ್ಬದ ಕಾರಣ ಜನ ಮನೆಯಲ್ಲಿಯೇ ತಮ್ಮ ಕುಟುಂಬದವರ ಜೊತೆ ಹೆಚ್ಚೆಚ್ಚು ಸಮಯ ಕಳೆದಿದ್ದಾರೆ. ಆದ ಕಾರಣ ಕಲೆಕ್ಷನ್ಸ್ ಅಂದುಕೊಂಡದ್ದಕ್ಕಿಂತ ಕಡಿಮೆ ಆಗಿದೆ ಎಂದು ಹೇಳಲಾಗಿದೆ. ಸದ್ಯ ನೆನ್ನೆ ಸಿನಿಮಾ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಛಾವಾ ಫಸ್ಟ್ ಡೇ 31 ಕೋಟಿ ರೂ. ಹಾಗೂ ಪುಷ್ಪಾ-2 ಮೊದಲ ದಿನವೇ 170 ಕೋಟಿ ರೂ. ಕಲೆಕ್ಷನ್ಸ್ ಮಾಡಿತ್ತು. ಅದಕ್ಕೆ ಹೋಲಿಸಿದರೆ ಸಿಖಂದರ್ ಕಲೆಕ್ಷನ್ ಅಷ್ಟಾಗಿ ಇಲ್ಲ ಎನ್ನಲಾಗಿದೆ.