March 16, 2026
Monday, March 16, 2026
spot_img

ಆರ್‌ಸಿಬಿ ಫ್ರಾಂಚೈಸಿ ಖರೀದಿ ಮಾಡ್ತಾರಾ ಸುಕೇಶ್? ಜೈಲಿನಿಂದಲೇ ಬಿಡ್‌ ಸಲ್ಲಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ,

ಐಪಿಎಲ್ ನ ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾರಾಟ ಪ್ರಕ್ರಿಯೆಯ ಶುರುವಾಗಿದ್ದು, ಈಗಾಗಲೇ ಹಲವಾರು ಜನರು ಖರೀದಿಗೆ ಚಿಂತಿಸುತ್ತಿದೆ.

ಇದರ ಭಾಗವಾಗಿ ಆರ್​ಸಿಬಿ ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ ಡಿಯಾಜಿಯೋ ಕಂಪನಿಯು, ಆಸಕ್ತ ಖರೀದಿದಾರರಿಗೆ ಮಾಹಿತಿ ಪತ್ರಗಳನ್ನು ವಿತರಿಸಿದೆ. ಹೀಗಾಗಿ ಇತ್ತ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಖರೀದಿಗೆ ಬಿಡ್‌ ಸಲ್ಲಿಸಿದ್ದಾರೆ.

ದೆಹಲಿ ಕಾರಾಗೃಹದಲ್ಲಿ ಬಂಧನದಲ್ಲಿರುವ ಸುಕೇಶ್‌ ಚಂದ್ರಶೇಖರ್‌‌, ಆರ್‌ಸಿಬಿಯ ಪ್ರವರ್ತಕ ಕಂಪನಿ ಡಿಯಾಜಿಯೊಗೆ ತಮ್ಮ ಸಂಸ್ಥೆ ಎಲ್‌ಎಸ್ ಹೋಲ್ಡಿಂಗ್ಸ್ ಮೂಲಕ ಪತ್ರ ಬರೆದು, ಫ್ರಾಂಚೈಸಿಯ ಮಾಲೀಕತ್ವವನ್ನು ಸ್ವಾಧೀನಪಡಿಸಿಕೊಳ್ಳಲು 1 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹ 8,300 ಕೋಟಿ) ಮೊತ್ತದ ಸಂಪೂರ್ಣ ನಗದು ಬಿಡ್ ಅನ್ನು ಪ್ರಸ್ತಾಪಿಸಿದ್ದಾರೆ. ಜೊತೆಗೆ ಯಾವುದೇ ಮೂರನೇ ವ್ಯಕ್ತಿಯ ನಿಧಿಯಿಲ್ಲದೆ 48 ಗಂಟೆಗಳ ಒಳಗೆ ಪಾವತಿಯನ್ನು ಪೂರ್ಣಗೊಳಿಸಲು LS ಹೋಲ್ಡಿಂಗ್ಸ್ ಸಿದ್ಧವಾಗಿದೆ ಎಂದು ಸೂಚಿಸಿದ್ದಾರೆ.

ಸುಖೇಶ್ ಆರ್‌ಸಿಬಿ ಫ್ರ್ಯಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡರೆ ಅದನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಉಡುಗೊರೆಯಾಗಿ ನೀಡಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಫ್ರ್ಯಾಂಚೈಸಿ ಖರೀದಿಸಲು ಸೀರಂ ಇನ್‌ಸ್ಟಿಟ್ಯೂಟ್‌ನ ಅದಾರ್ ‍ಪೂನಾವಾಲಾ ಬಿಡ್‌ ಸಲ್ಲಿಸಿ ಪೈಪೋಟಿಗೆ ಕಾವು ಏರಿಸಿದ್ದರು. ವರದಿಗಳ ಪ್ರಕಾರ ಈ ವರೆಗೆ 9 ಬಿಡ್‌ಗಳು ಸಲ್ಲಿಕೆಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !