ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಮಂಗಳವಾರ, ಹರಿಯಾಣ ಮತ್ತು ಪಂಜಾಬ್‌ನಿಂದ ದೆಹಲಿಗೆ ಆಗಮಿಸುವ ರೈತರನ್ನು ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ನಿಲ್ಲಿಸಲಾಗಿತ್ತು. ಐದಾರು ದಿನಗಳಿಂದ ಅನ್ನದಾತರ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಇಂದು ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದು, ಭಾರೀ ಕುತೂಹಲ ಮೂಡಿಸಿದೆ.
ರೈತರಿಗೆ ಬೆಂಬಲ ಬೆಲೆ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಕೇಂದ್ರದ ವಿರುದ್ಧ ಅನ್ನದಾತರು ನಡೆಸುತ್ತಿರುವ ಸಮರ ಇದೀಗ ಆರನೇ ದಿನಕ್ಕೆ ಕಾಲಿಟ್ಟಿದೆ. ಭದ್ರತಾ ಪಡೆಗಳ ಉಕ್ಕಿನ ಕೋಟೆಯು ಹರಿಯಾಣ, ಪಂಜಾಬ್ ಮತ್ತು ದೆಹಲಿಯ ಗಡಿಗಳಿಗೆ ರೈತರನ್ನು ತಡೆದು ನಿಲ್ಲಿಸಿದೆ.
ದಿಲ್ಲಿಯ ಗಡಿಯಲ್ಲಿ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಬೀಡುಬಿಟ್ಟಿರುವ ಅನ್ನದಾತರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಕೇಂದ್ರದೊಂದಿಗೆ ರೈತರ ಮಾತುಕತೆ ಈಗಾಗಲೇ ಮೂರು ಬಾರಿ ವಿಫಲವಾಗಿದ್ದು, ಇಂದು ಸಂಜೆ ನಾಲ್ಕನೇ ಸುತ್ತಿನ ಮಾತುಕತೆಗೆ ವೇದಿಕೆ ಸಜ್ಜಾಗಿದೆ.