ಇನ್ಮುಂದೆ ಓಲಾ, ಊಬರ್ ಮಾದರಿಯಲ್ಲೇ Ambulance ಬುಕಿಂಗ್ ವ್ಯವಸ್ಥೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಂದಿನ ದಿನಗಳಲ್ಲಿ ಓಲಾ, ಊಬರ್ ಆ್ಯಪ್​​ಗಳ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕ್ ಮಾಡಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಆ್ಯಂಬುಲೆನ್ಸ್​ ಹೆಚ್ಚಿನ ದರ ವಿಧಿಸುತ್ತಿವೆ ಎಂಬ ದೂರು ಇದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು.. ಕೆಪಿಎಂಇ ಅಡಿಯಲ್ಲಿ ಆ್ಯಂಬುಲೆನ್ಸ್​ಗಳನ್ನು ಸರ್ಕಾರದಡಿಯಲ್ಲಿ ತರುತ್ತಿದ್ದೇವೆ.

ಬರುವ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಆ್ಯಂಬುಲೆನ್ಸ್​ ಹೇಗಿರಬೇಕು, ಮಾನದಂಡ ಹೇಗಿರಬೇಕು. ಜೊತೆಗೆ ದರವನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋದ್ರ ಕುರಿತು ಚರ್ಚೆ ನಡೆಸಿ ನಿಯಮ ಜಾರಿಗೆ ತರುತ್ತವೆ. ಮೊಬೈಲ್ ಹೆಲ್ತ್ ಯುನಿಟ್​ಗಳು, ಆ್ಯಂಬುಲೆನ್ಸ್​ಗಳಿಗೆ ಕೆಪಿಎಂಇ ಲೈಸೆನ್ಸ್ ಕಡ್ಡಾಯ ಮಾಡುತ್ತೇವೆ.

ಓಲಾ, ಊಬರ್ ಆ್ಯಪ್​ಗಳ ರೀತಿಯಲ್ಲೇ ಆ್ಯಂಬುಲೆನ್ಸ್​ಗಳನ್ನು ಬುಕ್ ಮಾಡಬಹುದು. ಸರ್ವೀಸ್  ಯಾರೇ ಕೊಡಲಿ ದರ ಮೊದಲೇ ಫಿಕ್ಸ್ ಮಾಡುತಿದ್ದೇವೆ, ಪಾರದರ್ಶಕತೆ ತರುತಿದ್ದೇವೆ. ಆ್ಯಂಬುಲೆನ್ಸ್​​ಗಳು ಕ್ವಾಲಿಟಿ ಇರುವುದಿಲ್ಲ. ಅದರಲ್ಲಿ ಬರೀ ಗಾಡಿ ಇರುತ್ತದೆ, ಒಂದು ಬೆಡ್ ಮಾತ್ರ ಇರುತ್ತವೆ. ಹೀಗಾಗಿಯೇ ಆ್ಯಂಬುಲೆನ್ಸ್​ಗಳಿಗೆ ಮಾನದಂಡ ತರುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!