March 19, 2026
Thursday, March 19, 2026
spot_img

ವಿಶ್ವಕಪ್ ಅಖಾಡದಲ್ಲಿ ಮತ್ತೆ ಇಂಡೋ-ಪಾಕ್ ಧಮಾಕಾ? ಸೆಮಿಫೈನಲ್ ಮೇಲೆ ಅಭಿಮಾನಿಗಳ ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಅದೊಂದು ಹಬ್ಬದ ಸಂಭ್ರಮ. ಐಸಿಸಿ ಮತ್ತು ಎಸಿಸಿ ಟೂರ್ನಿಗಳಲ್ಲಿ ಮಾತ್ರ ಈ ತಂಡಗಳು ಮುಖಾಮುಖಿಯಾಗುವುದರಿಂದ, ಒಂದೇ ಟೂರ್ನಿಯಲ್ಲಿ ಎರಡು ಬಾರಿ ಇವರ ಆಟ ನೋಡಲು ಸಿಗುವುದು ಅಭಿಮಾನಿಗಳ ಅದೃಷ್ಟವೇ ಸರಿ. ಸದ್ಯ ನಡೆಯುತ್ತಿರುವ 2026ರ ಟಿ20 ವಿಶ್ವಕಪ್‌ನಲ್ಲಿ ಅಂತಹದ್ದೊಂದು ಅವಕಾಶ ಮತ್ತೆ ಒದಗಿಬರುವ ಸಾಧ್ಯತೆಗಳಿವೆ.

ಈಗಾಗಲೇ ಗ್ರೂಪ್ ಹಂತದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿ ಗೆಲುವಿನ ನಗೆ ಬೀರಿದೆ. ಆದರೆ ಪಂದ್ಯ ಇಲ್ಲಿಗೇ ಮುಗಿದಿಲ್ಲ; ಮುಂದಿನ ಹಂತಗಳಲ್ಲಿ ಇತ್ತಂಡಗಳು ಮತ್ತೆ ಕಾದಾಡುವ ಸಾಧ್ಯತೆ ದಟ್ಟವಾಗಿದೆ.

ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಿದರೆ, ಗ್ರೂಪ್ ‘ಎ’ ನಲ್ಲಿ ಎರಡನೇ ಸ್ಥಾನಿಯಾಗಿ ಸೂಪರ್ 8 ಹಂತಕ್ಕೇರಲಿದೆ. ಪ್ರಮುಖ ತಂಡಗಳ ಪ್ರದರ್ಶನದ ಆಧಾರದ ಮೇಲೆ ಸೂಪರ್ 8ರ ಗುಂಪುಗಳು ಹೀಗಿರಬಹುದು:

ಗುಂಪು 1ಗುಂಪು 2
ಭಾರತಇಂಗ್ಲೆಂಡ್
ಆಸ್ಟ್ರೇಲಿಯಾನ್ಯೂಜಿಲೆಂಡ್
ವೆಸ್ಟ್ ಇಂಡೀಸ್ಪಾಕಿಸ್ತಾನ
ದಕ್ಷಿಣ ಆಫ್ರಿಕಾಶ್ರೀಲಂಕಾ

ಸೂಪರ್ 8 ಹಂತದಲ್ಲಿ ಭಾರತವು ಫೆಬ್ರವರಿ 22 ರಂದು ದಕ್ಷಿಣ ಆಫ್ರಿಕಾ, ಫೆಬ್ರವರಿ 26 ರಂದು ಆಸ್ಟ್ರೇಲಿಯಾ ಮತ್ತು ನಂತರ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ. ಈ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಬೇರೆ ಬೇರೆ ಗುಂಪುಗಳಲ್ಲಿ ಇರುವುದರಿಂದ ನೇರ ಮುಖಾಮುಖಿ ಇರುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !