ಪ್ರೈಮರಿ ಇಮ್ಯುನೊ ಡೆಫಿಸಿಯನ್ಸಿ ಬಾಧಿತ ಈ ಬಾಲಕನ ಮುಖದಲ್ಲಿ ನಗು ಅರಳಿಸುವಿರಾ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಶಾಲಾ ಬಾಲಕಯೋರ್ವ ರೋಗ ನಿರೋಧಕ ಶಕ್ತಿಯಿಂದ (ಪ್ರೈಮರಿ ಇಮ್ಯುನೊ ಡೆಫಿಸಿಯನ್ಸಿ) ಬಳಲುತ್ತಿದ್ದು, ಆತನಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ . ಹೀಗಾಗಿ ಬಾಲಕ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆದಿಂಜೆ ಸಮೀಪದ ಬೋಳ ಪುರ್ಲಡ್ಕ ಪರಾರಿ ನಿವಾಸಿಗಳಾದ ಬಡ ಕಾರ್ಮಿಕ ದಂಪತಿಗಳಾದ ತಂದೆ ರಾಜೇಶ್ ಶೆಟ್ಟಿ, ತಾಯಿ ತ್ರಿವೇಣಿ ಶೆಟ್ಟಿ ಯವರಿಗೆ ಇಬ್ಬರು ಮಕ್ಕಳು. ಹಿರಿಯ ಮಗ 8ನೇ ತರಗತಿ ಬೆಳ್ಮಣ್ ಸಂತ ಜೋಸೆಫ್(ಕನ್ನಡ) ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಕಿರಿಯ ಮಗ ಬೆಳ್ಮಣ್ ಸಂತ ಜೋಸೆಫರ ಹಿ.ಪ್ರಾ.ಶಾಲಾ ಕನ್ನಡ ಮಾಧ್ಯಮದಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ರಿತಿಕ್ ಆರ್.ಶೆಟ್ಟಿ ಪ್ರೈಮರಿ ಇಮ್ಯುನೊ ಡೆಫಿಸಿಯನ್ಸಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದಕ್ಕಾಗಿ ಅಸ್ತಿಮಜ್ಜೆ (ಬೋನ್ಮರೊವ್ ಟ್ರಾನ್ಸ್‌ಪ್ಲಾಂಟ್) ನೀಡುವ ಶಸ್ತ್ರ ಚಿಕಿತ್ಸೆ ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಮಂಜರಪಲ್ಕೆ ಸಮೀಪದ ತೋಟದ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಬಡ ದಂಪತಿಗಳ ಮಗ ರಿತಿಕ್ ಆರ್.ಶೆಟ್ಟಿ (10) ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, 2016 ಜುಲೈಯಲ್ಲಿ ಸಾಲ ಮಾಡಿ ಹಾಗೂ ದಾನಿಗಳ ನೆರವಿನಿಂದ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಓಪನ್ ಹಾರ್ಟ್ ಸರ್ಜರಿ ನಡೆದಿತ್ತು, ಬಳಿಕ ಹೊಟ್ಟೆಯೊಳಗೆ ಕರುಳಿನಲ್ಲಿ ಕಲ್ಲುಗಡ್ಡೆಯಂತಿದ್ದು ಇದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದರೂ, ಆಗಾಗ ನ್ಯುಮೇನಿಯಾ ಬರುತ್ತಿದ್ದು, ಬಳಿಕ ಬೆಂಗಳೂರಿನ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಿದಾಗ ಇಮ್ಯುನೊ ಡೆಫಿಸಿಯನ್ಸಿ ಕಾಯಿಲೆ ಇರುವುದು ದೃಢಪಟ್ಟಿದೆ. ಇದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು ಅಂದಾಜು ರೂ. 43 ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ ಹೀಗಾಗಿ ಕುಟುಂಬ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಬ್ಯಾಂಕ್ ವಿವರ:
ನೆರವು ನೀಡಲಿಚ್ಚಿಸುವವರು ತ್ರಿವೇಣಿಯವರ ಸಚ್ಚೇರಿಪೇಟೆಯ ಶಾಖೆಯ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0646101014035 (Ifsc code: CNRB0000646) ಹಾಗೂ 7349269037 ಸಂಖ್ಯೆಯನ್ನು ಸಂಪರ್ಕಿಸಬಹುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!