ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಸೋಲಿನ ಸರಣಿ ಕಡಿದು ಮತ್ತೆ ಗೆಲುವಿನ ಹಳಿಯೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರ್‌ಸಿಬಿ 23 ರನ್‌ಗಳಿಂದ ಪರಾಭವಗೊಳಿಸಿತು.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ವಿರಾಟ್‌ಕೊಹ್ಲಿಯ ಅರ್ಧ ಶತಕದ ನೆರವಿನಿಂದ 6 ವಿಕೆಟಿಗೆ 174 ರನ್ ಗಳಿಸಿತು. ಕೊಹ್ಲಿ 36 ಎಸೆತಗಳಿಂದ 50 ರನ್ ಮಾಡಿದರು. ಫಾಫ್ ಡುಪ್ಲೆಸಿ 22, ಮಹಿಪಾಲ್ 26 ಮತ್ತು ಮ್ಯಾಕ್ಸ್‌ವೆಲ್ 24 ರನ್ ಗಳ ಕೊಡುಗೆ ನೀಡಿದರು.
ಇದಕ್ಕುತ್ತವಾಗಿ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟಿಗೆ 151 ರನ್ ಗಳಿಸಲಷ್ಟೇ ಶಕ್ತವಾಯಿತು. ಮನೀಶ್‌ಪಾಂಡೆ 50 ರನ್ ಗಳಿಸಿದ್ದೇ ಗರಿಷ್ಠ ಸ್ಕೋರು. ಆರ್‌ಸಿಬಿ ಪರವಾಗಿ ಕರ್ನಾಟಕದ ವೇಗಿ ವಿಜಯಕುಮಾರ್ ವೈಶಾಖ್ 20 ರನ್‌ಗಳಿಗೆ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರು.