ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ನಾಗರಿಕರ ಅನುಮಾನಾಸ್ಪದ ಸಾವುಗಳ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಜಮ್ಮುವಿನ ರಾಜೌರಿಗೆ ಭೇಟಿ ನೀಡಿದ್ದು, ಸೇನೆಗಳ ಜತೆಗೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಭಾರತೀಯ ಸೇನೆಗೆ ದೇಶವನ್ನು ಮಾತ್ರವಲ್ಲದೆ ದೇಶವಾಸಿಗಳ ಹೃದಯವನ್ನೂ ಗೆಲ್ಲಬೇಕು. ಇನ್ನಾದರೂ ಜಾಗೃತರಾಗಬೇಕು ಎಂದು ಹೇಳಿದ್ದಾರೆ.
ನಾಲ್ಕು ಸೈನಿಕರ ಸಾವಿನ ನಂತರ ತನಿಖೆಗಾಗಿ ರಾಜೌರಿಯ ನಾಗರಿಕರನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ನಾಗರಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೇನೆ ತನಿಖೆಯನ್ನು ನಡೆಸುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್ ಅಮಾಯಕ ನಾಗರಿಕರ ಮೇಲಿನ ಹಿಂಸಾಚಾರವನ್ನು ಸಹಿಸುವುದಿಲ್ಲ. ನೀವು ದೇಶದ ರಕ್ಷಕರು. ಆದರೆ ದೇಶದ ಭದ್ರತೆ ಮಾಡುವುದರ ಜತೆಗೆ ಇಲ್ಲಿನ ಜನರ ಹೃದಯವನ್ನು ಗೆಲ್ಲುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಭಾರತೀಯನನ್ನು ನೋಯಿಸುವ ಯಾವುದೇ ತಪ್ಪು ಮಾಡಬೇಡಿ ಎಂದು ಹೇಳಿದ್ದಾರೆ.
ಸೇನೆ ಇಲ್ಲಿನ ಜನರ ಜತೆಗೆ ನಿಕಟವಾದ ಸಂಬಂಧವನ್ನು ಹೊಂದಬೇಕು. ನಾವು ಯುದ್ಧಗಳನ್ನು ಗೆಲ್ಲಬೇಕು, ಭಯೋತ್ಪಾದಕರನ್ನು ತೊಡೆದುಹಾಕಬೇಕು, ಆದರೆ ಜನರ ಹೃದಯವನ್ನು ಗೆಲ್ಲುವುದು ಪ್ರಮುಖವಾಗಿದೆ. ಆದರೆ ನಾವು ಜನರ ಹೃದಯಗಳನ್ನು ಸಹ ಗೆಲ್ಲಬೇಕು. ಮತ್ತು ಇದನ್ನು ಮಾಡಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಪ್ರತಿಯೊಬ್ಬ ಸೈನಿಕನು ಭಾರತ ನಾಗರಿಕರಿಗೆ ಕುಟುಂಬ ಸದಸ್ಯನಂತೆ. ಅವರು ನಿಮ್ಮ ಮೇಲೆ (ಸೈನಿಕರ) ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಈ ಬಗ್ಗೆ ಯೋಚನೆ ಮಾಡುತ್ತಾಳೆ. ನಿಮ್ಮನ್ನು ವಿರೋಧಿಸುವವರನ್ನು ನಾವು ಎಂದು ಸಹಿಸುವುದಿಲ್ಲ. ಇನ್ನು ಇಂತಹ ದಾಳಿಗಳಲ್ಲಿ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಪ್ರತಿದಿನವು ನಿಮ್ಮ ಸೇವೆಗೆ ಮತ್ತು ರಕ್ಷಣೆಗೆ ನಾವು ಸಿದ್ದ ಎಂದು ಹೇಳಿದ್ದಾರೆ.
ನೀವು ಇಲ್ಲಿ ಜಾಗರೂಕರಾಗಿದ್ದೀರಿ ಎಂದು ಭಾವಿಸುತ್ತೇನೆ. ಅದರೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು ನೀವು. ಇಲ್ಲಿಯವರೆಗೆ ನೀವು ಮಾಡಿ ಎಲ್ಲ ಕೆಲಸಕ್ಕೂ ನಾವು ಬೆಂಬಲವಾಗಿ ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ. ನಿಮ್ಮ ಶೌರ್ಯ ನಮಗೆ ಗೌರವ ತಂದಿದೆ ಎಂದು ಹೇಳಿದರು.
ಕಳೆದ ಗುರುವಾರ ರಜೌರಿಯಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದರು. ನಂತರ ಸೇನೆಯು ಮೂವರು ಸ್ಥಳೀಯ ಯುವಕರನ್ನು ವಿಚಾರಣೆಗಾಗಿ ಕರೆದೊಯ್ದಿತ್ತು. ನಂತರ ಅವರು ಶವವಾಗಿ ಪತ್ತೆಯಾಗಿದ್ದರು. ಇದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿತ್ತು.