ಬೆಂಗಳೂರಿನಲ್ಲಿ ಗಾಳಿ ಮಳೆ ಅಲರ್ಟ್: ಸಲಹೆ ಕೊಟ್ಟ ಹವಾಮಾನ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ ಮಳೆ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಗುಡುಗು ಸಹಿತ 40 ರಿಂದ 50 ಕೀ.ಮಿ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬರಲಿದ್ದು, ಮಳೆಯಿಂದ ಜನರು ಜಾಗ್ರತೆ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಹೀಗಾಗಿ ಮಳೆ ಸಂದರ್ಭದಲ್ಲಿ ಅವಘಡ ಸಂಭವ ಹಿನ್ನಲೆ ಸಾರ್ವಜನಿಕರಿಗೆ ಹವಾಮಾನ ಇಲಾಖೆ ಕೆಲ ಸಲಹೆಗಳನ್ನು ಕೊಟ್ಟಿದೆ.

  • ಮನೆಯೊಳಗೆ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಇರಬೇಕು.
  • ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ.
  • ಮರಗಳ ಕೆಳಗೆ ಆಶ್ರಯ ಪಡೆಯಬೇಡಿ.
  • ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ.
  • ಎಲೆಕ್ನಿಕಲ್,ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡಿ.
  • ಮಳೆ ವೇಳೆ ತಕ್ಷಣ ಜಲಮೂಲಗಳಿಂದ ಹೊರ ಬರುವಂತೆ ಸೂಚನೆ.
  • ವಿದ್ಯುಚ್ಛಕ್ತಿಯನ್ನು ನಡೆಸುವ ಎಲ್ಲಾ ವಸ್ತುಗಳಿಂದ ದೂರವಿರಿ.
  • ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!