ಹೊಸದಿಗಂತ ವರದಿ, ಮುಂಡಗೋಡ:
ಮುಂಡಗೋಡ ತಾಲೂಕಿನಾದ್ಯಂತ ಜೋರಾದ ಗಾಳಿಮಳೆ ಹಾಗೂ ಮಿಂಚು ಸಿಡಿಲುಗಳ ಅರ್ಭಟಕ್ಕೆ ಪಟ್ಟಣದ ಇಂದಿರಾನಗದಲ್ಲಿ ತೆಂಗಿನಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಉರಿದ ಘಟನೆ ಶನಿವಾರ ನಡೆದಿದೆ.
ಪಟ್ಟಣದ ಇಂದಿರಾನಗದ ಬಶೀರ ಅಹ್ಮದ ಗುರ್ನಳ್ಳಿ ಎಂಬಯವರ ಮನೆಯ ಹಿಂಬದಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡೆದಿದೆ ಇದರಿಂದ ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿದೆ.
ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಬೆಂದಿದ್ದ ಜನರಿಗೆ ಇವತ್ತು ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ತಂಪೆರೇದಿದೆ.