ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಉತ್ತರ, ವಾಯುವ್ಯ, ಮಧ್ಯ ಮತ್ತು ದಕ್ಷಿಣ ದೆಹಲಿ ಸೇರಿದಂತೆ ಗುರುಗ್ರಾಮ್ ಹಾಗೂ ಫರಿದಾಬಾದ್ನಲ್ಲಿ ಸಾಧಾರಣ ಮಳೆಯಾಗಲಿದೆ.
ಗರಿಷ್ಠ ತಾಪಮಾನ 32°C ನಿಂದ 34°C ನಡುವೆ ಇರಲಿದ್ದು, ಕನಿಷ್ಠ ತಾಪಮಾನ 20.4°C ಗೆ ಇಳಿಕೆಯಾಗುವ ಸಾಧ್ಯತೆಯಿದೆ. ಮೀರತ್, ಬಾಗ್ಪತ್, ಮುಜಫರ್ನಗರ, ಸಹರಾನ್ಪುರ ಮತ್ತು ಬಿಜ್ನೋರ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಫರುಖ್ನಗರ, ರೇವಾರಿ, ಪಲ್ವಾಲ್ ಮತ್ತು ಭಿವಾಡಿಯಲ್ಲಿ ಗಂಟೆಗೆ 60 ರಿಂದ 80 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಕುರುಕ್ಷೇತ್ರ, ಪಾಣಿಪತ್ ಮತ್ತು ಹಿಸಾರ್ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ.



