April 28, 2026
Tuesday, April 28, 2026
spot_img

ಬರೋಬ್ಬರಿ 438.29 ಕೋಟಿ ವೆಚ್ಚದಲ್ಲಿ ನವಮಂಗಳೂರು ಬಂದರು ಲಂಗರುದಾಣ ಅಭಿವೃದ್ಧಿ: ಬೃಹತ್ ತೈಲ ಹಡಗು ಸಂಚಾರಕ್ಕೆ ಅನುವು

ಹೊಸದಿಗಂತ ಡಿಜಿಟಲ್ ಡೆಸ್ಕ್:


ನವಮಂಗಳೂರು ಬಂದರು ಮಂಡಳಿಯ 9ನೇ ಲಂಗರುದಾಣದ ಆಳವನ್ನು ಖಾಸಗಿ ಸಹಭಾಗಿತ್ವದೊಂದಿಗೆ ಪುನರ್ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


ಸುಮಾರು 438.29 ಕೋಟಿ ರೂಪಾಯಿ ಅನುದಾನದೊಂದಿಗೆ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಬಂದರು ಮತ್ತು ಹಡಗು ಸಚಿವಾಲಯ ತಿಳಿಸಿದೆ.


ಈ ಯೋಜನೆಯು ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯಂತಹ ಬೃಹತ್ ಸರಕುಗಳನ್ನು ಸುಲಭವಾಗಿ ನಿರ್ವಹಿಸಲು 9ನೇ ಸಂಖ್ಯೆಯ ಬರ್ತ್ ಡ್ರಾಫ್ಟ್‌ನ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಪ್ರಸ್ತುತ ಇರುವ 10.5 ಮೀಟರ್ ಆಳವನ್ನು 14 ಮೀಟರ್‌ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಭವಿಷ್ಯದ ಸಿದ್ಧ ವಿನ್ಯಾಸ ನಿಬಂಧನೆಯೊಂದಿಗೆ ಇದನ್ನು 19.8 ಮೀಟರ್‌ಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.


ಇದರಿಂದ 2 ಲಕ್ಷ ಡಿಡಬ್ಲ್ಯುಟಿ ವರೆಗಿನ ಅತಿ ದೊಡ್ಡ ಅನಿಲ ವಾಹಕಗಳು ಮತ್ತು ತೈಲ ಹಡಗುಗಳಿಗೆ ಸ್ಥಳಾವಕಾಶ ದೊರೆಯಲಿದೆ ಎಂದು ಸಚಿವಾಲಯ ವಿವರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !