January16, 2026
Friday, January 16, 2026
spot_img

Winter Care | ನಿಮ್ಮ ಪಾದಗಳು ಪದೇ ಪದೇ ಮರಗಟ್ಟುತ್ತವೆಯೇ? ಬಿ-12 ಕೊರತೆ ಇರಬಹುದು, ಎಚ್ಚರ!

ಚಳಿಗಾಲದ ಹವಮಾನ ಶುರುವಾಗುತ್ತಿದ್ದಂತೆ ಅನೇಕರಲ್ಲಿ ಕೈಕಾಲು ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಸಾಮಾನ್ಯ. ಹೆಚ್ಚಿನವರು ಇದನ್ನು ಕೇವಲ “ಚಳಿಯ ಪ್ರಭಾವ” ಎಂದು ಭಾವಿಸಿ ಕಡೆಗಣಿಸುತ್ತಾರೆ. ಆದರೆ, ಇದು ನಿಮ್ಮ ದೇಹ ನೀಡುತ್ತಿರುವ ಗಂಭೀರ ಆರೋಗ್ಯದ ಮುನ್ಸೂಚನೆಯೂ ಇರಬಹುದು ಎಂಬುದು ನಿಮಗೆ ತಿಳಿದಿದೆಯೇ?

ಅತಿಯಾದ ಚಳಿ ಇದ್ದಾಗ ನಮ್ಮ ದೇಹವು ಹೃದಯ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳನ್ನು ಬೆಚ್ಚಗಿಡಲು ಪ್ರಯತ್ನಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೈಕಾಲುಗಳಿಗೆ ರಕ್ತದ ಹರಿವು ತಾತ್ಕಾಲಿಕವಾಗಿ ಕಡಿಮೆಯಾಗುವುದರಿಂದ ಬೆರಳುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಕೈಗವಸು ಧರಿಸಿದಾಗ ಅಥವಾ ಬೆಚ್ಚಗಿನ ವಾತಾವರಣಕ್ಕೆ ಮರಳಿದಾಗ ಇದು ಸರಿಯಾದರೆ ಚಿಂತಿಸುವ ಅಗತ್ಯವಿಲ್ಲ.

ಒಂದು ವೇಳೆ ಚಳಿ ಇಲ್ಲದಿದ್ದರೂ ನಿಮಗೆ ಪದೇ ಪದೇ ಕೈಕಾಲು ಜುಮ್ಮೆನ್ನುತ್ತಿದ್ದರೆ ಅಥವಾ ಮರಗಟ್ಟುವಿಕೆ ದೀರ್ಘಕಾಲ ಕಾಡುತ್ತಿದ್ದರೆ ಅದು ನರ ಸಂಬಂಧಿತ ಸಮಸ್ಯೆಯಾಗಿರುವ ಸಾಧ್ಯತೆ ಹೆಚ್ಚು. ಈ ಕೆಳಗಿನ ಲಕ್ಷಣಗಳಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ:

ಕೈಕಾಲುಗಳಲ್ಲಿ ಉರಿ ಅಥವಾ ವಿಪರೀತ ನೋವು. ನಡೆಯುವಾಗ ಸಮತೋಲನ ತಪ್ಪಿದಂತಾಗುವುದು.

ಕೇವಲ ಚಳಿ ಮಾತ್ರವಲ್ಲದೆ, ವಿಟಮಿನ್ ಬಿ 12 ಕೊರತೆ, ಮಧುಮೇಹ, ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಅಥವಾ ನರಗಳ ಮೇಲೆ ಬೀಳುವ ಒತ್ತಡವು ಈ ಮರಗಟ್ಟುವಿಕೆಗೆ ಮೂಲ ಕಾರಣವಾಗಿರಬಹುದು.

ಪರಿಹಾರ ಮತ್ತು ಮುನ್ನೆಚ್ಚರಿಕಾ ಕ್ರಮಗಳು:

ಬೆಚ್ಚಗಿರಲಿ ದೇಹ: ಹೊರಗೆ ಹೋಗುವಾಗ ಸ್ವೆಟರ್, ಸಾಕ್ಸ್ ಮತ್ತು ಕೈಗವಸುಗಳನ್ನು ತಪ್ಪದೇ ಬಳಸಿ.

ಉಗುರು ಬೆಚ್ಚಗಿನ ನೀರಿನ ಬಳಕೆ: ಮರಗಟ್ಟಿದ ಭಾಗಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

ಪೌಷ್ಟಿಕ ಆಹಾರ: ನಿಮ್ಮ ಆಹಾರದಲ್ಲಿ ವಿಟಮಿನ್ ಬಿ 12 ಸಮೃದ್ಧವಾಗಿರುವ ಮೊಟ್ಟೆ, ಹಾಲು ಅಥವಾ ಧಾನ್ಯಗಳನ್ನು ಸೇರಿಸಿ.

ಚಟುವಟಿಕೆಯಿಂದಿರಿ: ಲಘು ವ್ಯಾಯಾಮ ಮತ್ತು ಸ್ಟ್ರೆಚಿಂಗ್ ಮಾಡುವುದರಿಂದ ನರಗಳ ಆರೋಗ್ಯ ಸುಧಾರಿಸುತ್ತದೆ.

Must Read

error: Content is protected !!