Saturday, November 8, 2025

Health | ಚಳಿಗಾಲ ಬಂದೇಬಿಡ್ತಲ್ಲ! ಹೀಗಿರಲಿ ನಿಮ್ಮ ಆಹಾರ ಪದ್ಧತಿ

ಚಳಿಗಾಲ ಹತ್ತಿರ ಬರುತ್ತಿದೆ, ಇನ್ನೇನು ಆರೋಗ್ಯ ಜೋಪಾನ ಮಾಡುವ ಸಮಯ ಬರುತ್ತಿದೆ. ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರ ಸೇವನೆ ಮಾಡಿ. ಬಿಸಿ ಸೂಪ್‌, ಕಿಚಡಿ ಬೌಲ್ಸ್‌, ಬಿಸಿ ಅನ್ನ, ತರಕಾರಿ, ಮೊಟ್ಟೆ, ಮೀನು ಹಾಗೂ ಪ್ರೋಟೀನ್‌ ಇರುವ ಪದಾರ್ಥಗಳನ್ನು ಸೇವಿಸಿ. ಇನ್ನು ಡ್ರೈ ಫ್ರೂಟ್ಸ್‌ ಹಾಗೂ ಎಣ್ಣೆ ಇರುವ ಕಾಳುಗಳನ್ನು ತಪ್ಪದೇ ಡಯಟ್‌ನಲ್ಲಿ ಸೇರಿಸಿಕೊಳ್ಳಿ.

ನಿಮ್ಮ ತಟ್ಟೆಯಲ್ಲಿ ಹಸಿರು ಸೊಪ್ಪು, ಹಸಿರು ತರಕಾರಿಗಳು ಧಾರಾಳವಾಗಿರಲಿ. ಮೆಂತೆ, ಪಾಲಕ್‌ನಿಂದ ಹಿಡಿದು ದಂಟು, ಹೊನಗನ್ನೆಯವರೆಗೆ ಎಲ್ಲಾ ರೀತಿಯ ಸೊಪ್ಪುಗಳನ್ನು ತಿನ್ನಿ. ಹಿಂದೆ ಹೊಲಗಳಿಂದ ಕಿತ್ತು ತರುತ್ತಿದ್ದ ಬೆರಕೆ ಸೊಪ್ಪುಗಳ ಸೇವನೆ ಈ ಮಟ್ಟಿಗೆ ಬಹಳ ಉಪಯುಕ್ತ.

ಕ್ಯಾಪ್ಸಿಕಂ, ಬೆಂಡೆಕಾಯಿ ಯಿಂದು ಹಿಡಿದು, ಎಲೆಕೋಸು, ಬ್ರೊಕೊಲಿಯವರೆಗೆ ಹಸಿರು ತರಕಾರಿಗಳನ್ನು ಭರಪೂರ ಸೇವಿಸಿ. ಚಳಿಗಾಲದಲ್ಲಿ ಏರುವ ತೂಕಕ್ಕೆ ಕಡಿವಾಣ ಹಾಕುವುದರಿಂದ ಹಿಡಿದು, ಮಧುಮೇಹ ನಿಯಂತ್ರಣ, ರಕ್ತದೊತ್ತಡ ಹತೋಟಿಯವರೆಗೆ ಹಲವು ರೀತಿಯಲ್ಲಿ ಇವು ಉಪಕಾರ ಮಾಡುತ್ತವೆ.

ಚಳಿಗಾಲವೆಂದರೆ ಬಹಳಷ್ಟು ಗಡ್ಡೆಗಳು ಬೆಳೆದು-ಕೀಳುವ ದಿನಗಳು. ಅದರಲ್ಲೂ ಗಿಡಗಳ ಬೇರು ಮತ್ತು ಗಡ್ಡೆಗಳು ಪೋಷ ಕಾಂಶಗಳ ಖಜಾನೆಯಂತೆ ವರ್ತಿಸುತ್ತವೆ. ಈರುಳ್ಳಿ, ಅರಿಶಿನ, ಶುಂಠಿ, ಸುವರ್ಣ ಗಡ್ಡೆ, ಗೆಣಸು, ಬೀಟ್‌ರೂಟ್‌, ಗಜ್ಜರಿ ಗಡ್ಡೆ, ಟರ್ನಿಪ್‌ ಮುಂತಾದವುಗಳನ್ನು ಧಾರಾಳವಾಗಿ ಬಳಸಿ. ದೇಹಕ್ಕೆ ಉತ್ತಮ ಗುಣಮಟ್ಟದ ಪೋಷಕಾಂಶಗಳನ್ನು ಈ ಗಡ್ಡೆ-ಗೆಣಸುಗಳು ಒದಗಿಸ ಬಲ್ಲವು.

ಇಡೀ ಕಾಳುಗಳು, ಅಂದರೆ ಹೆಚ್ಚು ಸಂಸ್ಕರಿಸದೆ ಇರುವಂಥ ಧಾನ್ಯಗಳಿವು. ಅವುಗಳ ತೌಡು, ಸಿಪ್ಪೆಗಳೆಲ್ಲಾ ಬೇರ್ಪ ಡದೆ- ಎಲ್ಲವುಗಳ ಸಮೇತ ತಿನ್ನು ವಂಥವು. ಇವುಗಳು ದೇಹಕ್ಕೆ ಅತ್ಯಗತ್ಯವಾದ ಸಂಕೀರ್ಣ ಪಿಷ್ಟವನ್ನು ನಾರಿನ ಸಮೇತ ಒದಗಿಸಬಲ್ಲವು. ಅದರಲ್ಲೂ ಜೋಳ, ಸಜ್ಜೆ, ರಾಗಿ ಮುಂತಾದ ಸಿರಿ ಧಾನ್ಯಗಳೆಲ್ಲಾ ಆಹಾರದಲ್ಲಿ ಇರಬೇಕು. ಇವು ಜೀರ್ಣವಾಗುವುದಕ್ಕೆ ಹೆಚ್ಚು ಸಮಯ ತೆಗೆದು ಕೊಂಡು, ದೀರ್ಘ ಕಾಲದವರೆಗೆ ಶರೀರಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತಲೇ ಇರುತ್ತವೆ.

error: Content is protected !!