ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಿಚ್ಚ ಸುದೀಪ್ (Kiccha Sudeep), ಟೀಮ್ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಅವರನ್ನು ಭೇಟಿ ಮಾಡಿದ್ದಾರೆ.
ಸುದೀಪ್ ಇತ್ತೀಚಿಗೆ ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Kcc) ವಿಚಾರವಾಗಿ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಕ್ರಿಕೆಟಿಗ ಶಿಖರ್ ಧವನ್ ಅವರನ್ನ ಭೇಟಿ ಮಾಡಿದ್ದಾರೆ ಈ ಕುರಿತ ಫೋಟೋ ಹಂಚಿಕೊಂಡು, ಶಿಖರ್‌ಗೆ ನಟ ಶುಭಹಾರೈಸಿದ್ದಾರೆ.
ಎಡಗೈ ಬ್ಯಾಟ್ಸ್‌ಮೆನ್ ಶಿಖರ್ ಜೊತೆಗಿನ ಫೋಟೋ ಹಂಚಿಕೊಂಡು ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ. ಮುಂಬರುವ ಐಪಿಎಲ್‌ಗೆ ನನ್ನ ಸಹೋದರನಿಗೆ ಶುಭಾಶಯಗಳು ಎಂದು ಕಿಚ್ಚ ಸುದೀಪ್ (Kiccha Sudeep) ವಿಶ್ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.