ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಇನ್ನೇನು ದೀಪಾವಳಿ ಸಂಭ್ರಮ ಆರಂಭವಾಗಲಿದ್ದು, ಸಾಲು ಸಾಲು ರಜೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಊರಿಗೆ ಹೊರಡಲು ಜನ ಕಾತರರಾಗಿದ್ದಾರೆ. ಹಬ್ಬದ ಹಿಂದೆಯೇ ವೀಕೆಂಡ್ ಬಂದಿರುವ ಕಾರಣ ಊರುಗಳಿಗೆ ಹೊರಡಲು ಜನ ಪ್ಲ್ಯಾನ್ ಹಾಕಿದ್ದಾರೆ. ಆದರೆ ಊರಿಗೆ ಹೋಗೋದೇ ಕಷ್ಟವಾಗಿದೆ.
ಹಬ್ಬ ಬಂದ ಕಾರಣ ಖಾಸಗಿ ಬಸ್‌ಗಳು ತಮ್ಮ ಟಿಕೆಟ್ ಚಾರ್ಜ್‌ನ್ನು ಮನಬಂದಂತೆ ಏರಿಕೆ ಮಾಡಿವೆ. ರೈಲುಗಳ ಬುಕ್ಕಿಂಗ್ ಈಗಾಗಲೇ ಕ್ಲೋಸ್ ಆಗಿದ್ದು, ಜನ ಅನಿವಾರ್ಯವಾಗಿ ಬಸ್‌ಗಳ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಜನ ತಮ್ಮ ಕುಟುಂಬದವರೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ಹೊರಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ರಜೆಯ ಯೋಜನೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಇದೇ ಶುಕ್ರವಾರ 17ರಂದು ರಾತ್ರಿಯೇ ಹೊರಡೋ ಪ್ಲಾನ್ ಮಾಡಿದ್ದಾರೆ. 18 ಶನಿವಾರ, 19 ಭಾನುವಾರ, 20 ನರಕ ಚತುರ್ದಶಿ, 21 ಅಮಾವ್ಯಾಸೆ, 22 ದೀಪಾವಳಿಯಿದೆ. ಹೀಗಾಗಿ ಸಾಲು ಸಾಲು ರಜೆ ಬಂದಿವೆ.
ಇದೇ ಶುಕ್ರವಾರ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ತೆರಳೋ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ದುಪ್ಪಟು ಮಾಡಿವೆ. ಇನ್ನೂ ಕೆಲ ಬಸ್‌ಗಳು 50% ಟಿಕೆಟ್ ದರ ಏರಿಕೆ ಮಾಡಿದ್ದು, ಈ ಸೀಜನ್ 30%ವರೆಗೂ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಅಂತಾರೆ ಖಾಸಗಿ ಬಸ್‌ಗಳ ಮಾಲೀಕರು.
ಹಬ್ಬಕ್ಕೆ ಸಾಲು ಸಾಲು ರಜೆ, ಖಾಸಗಿ ಬಸ್ ಟಿಕೆಟ್ ದರ ನೋಡಿದ್ರೆ ಊರಿಗೆ ಹೋಗೋದೇ ಬೇಡ ಬಿಡಿ!
