ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ನಡೆದ ಆಪರೇಷನ್ ಸಿಂಧೂರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಷ್ಟಕ್ಕೆ ಮಹಾದೇವನ ಆಶೀರ್ವಾದದೊಂದಿಗೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ಮಹಾದೇವನಿಗೆ ಅರ್ಪಿಸಿದ್ದಾರೆ.
“ಆಪರೇಷನ್ ಸಿಂಧೂರ್ ನಂತರ ನಾನು ಕಾಶಿಗೆ ಬಂದಿರುವುದು ಇದೇ ಮೊದಲು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಅಮಾಯಕ ನಾಗರಿಕರನ್ನು ನಿರ್ದಯವಾಗಿ ಕೊಂದರು… ನನ್ನ ಹೃದಯ ದುಃಖದಿಂದ ತುಂಬಿತ್ತು. ನನ್ನ ಹೆಣ್ಣುಮಕ್ಕಳ ಸಿಂಧೂರ್‌ಗೆ ಸೇಡು ತೀರಿಸಿಕೊಳ್ಳುವುದಾಗಿ ನಾನು ಪ್ರತಿಜ್ಞೆ ಮಾಡಿದ್ದೆ, ಮತ್ತು ನಾನು ಅದನ್ನು ಮಹಾದೇವನ ಆಶೀರ್ವಾದದೊಂದಿಗೆ ಪೂರೈಸಿದೆ. ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ಮಹಾದೇವನ ಪಾದಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ನಡೆಸಿದ್ದು, ಇದರಲ್ಲಿ 26 ಜನರು ಸಾವನ್ನಪ್ಪಿದರು.