ಹೊಸದಿಗಂತ ವರದಿ ಮೈಸೂರು:
ಸರ್ಕಾರಿ ಶಾಲೆಯಲ್ಲಿ ಪ್ರತಿ ತಿಂಗಳು ಪ್ರತಿ ಮಗುವಿನ ಪೋಷಕ ರಿಂದ ನೂರು ರೂ ಸಂಗ್ರಹ ಆದೇಶ ವನ್ನು ಕೂಡಲೇ ವಾಪಾಸ್ ತೆಗೆದು ಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿದ ಈ ಆದೇಶ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಯಾಗಲಿದೆ, ಶಾಲೆಯ ಬೆಳವಣಿಗೆ, ಬಡ ಮಕ್ಕಳ ಶಿಕ್ಷಣ ಕುಂಠಿತ ವಾಗಲಿದೆ ಎಂದು ಹೇಳಿದರು.
ದಲಿತರ ಮನೆಗೆ ಸಿಎಂ ಹಾಗೂ ಸಚಿವರು ಕಾರ್ಯಕ್ರಮ ದ ಮೂಲಕ ಹೋಗಬೇಕೆ ವಿನಹ, ಹೊರಗಡೆ ಯಿಂದ ತಿಂಡಿ, ತಟ್ಟೆ, ಲೋಟಗಳನ್ನು ತೆಗೆದುಕೊಂಡು ಅವರ ಮನೆಗೆ ತಿಂಡಿ ತಿನ್ನಲು ಹೋಗಬಾರದು. ಹೋಗಿ ಅಸ್ಪೃಶ್ಯತೆ ಆಚರಣೆ ಮತ್ತೆ ಜಾರಿಗೆ ತರಬಾರದು.ದಲಿತರ ಭಾವನೆ ಗಳಿಗೆ ಘಾಸಿಯನ್ನುಂಟು ಮಾಡಿ, ಅವಮಾನ ಮಾಡಬಾರದು. ಕೂಡಲೇ ಎಲ್ಲರೂ ಈ ನಾಟಕಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಹೆಚ್.ಡಿ.ಕೋಟೆಯಲ್ಲಿ ಆದಿವಾಸಿ ಕರಿಯಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಕರೆಯಿಸಿಕೊಂಡಿರುವ ಅರಣ್ಯ ಇಲಾಖೆಯ ಎಲ್ಲಾ 17 ಮಂದಿ ಆರೋಪಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.