ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಅದ್ದೂರಿಯಾಗಿ ಪ್ರದರ್ಶನವಾಗುತ್ತಿದ್ದು, ಅಭಿಮಾನಿಗಳು ಸಿನಿಮಾವನ್ನು ಸ್ವೀಕರಿಸಿದ್ದಾರೆ.
ಎಲ್ಲ ಅಡಚಣೆಗಳ ಮಧ್ಯೆ ಜನವರಿ 25ರಂದು ದೇಶ-ವಿದೇಶಗಳಲ್ಲಿ ತೆರೆಕಂಡು, ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲೂ ಮುನ್ನುಗ್ಗುತ್ತಿದೆ.ಈ ಮಧ್ಯೆ ‘ಪಠಾಣ್’ ಚಿತ್ರದ (Pathaan Movie) ಬಗ್ಗೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ನಟಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ ಘಟನೆಯೂ ನಡೆದಿದೆ.
ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅನುಭವ ಹೇಳಿಕೊಂಡ ದೀಪಿಕಾ, ಹಾಗೇ,ಸಿನಿಮಾ ಬಿಡುಗಡೆಯಾದ ನಂತರ ಅಭಿಮಾನಿಗಳಿಂದ ಬರುವ ಪ್ರೀತಿ-ಹೊಗಳಿಕೆಗೆ ತುಂಬ ಮೌಲ್ಯವಿದೆ. ನಮಗೆ ತೃಪ್ತಿ ನೀಡುತ್ತದ’ ಎಂದು ಹೇಳಿದರು.
ಬಳಿಕ ಶಾರುಖ್ ಖಾನ್ ಬಗ್ಗೆ ಮಾತನಾಡಿ ‘ಇವರು ಇಲ್ಲದೆ ಹೋದರೆ, ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನನ್ನ ಮೊದಲ ಹಿಂದಿ ಸಿನಿಮಾದಲ್ಲಿ ಶಾರುಖ್ ಅವರು ನನಗೆ ತುಂಬ ಪ್ರೀತಿಯಿಂದ ಸಪೋರ್ಟ್ ಮಾಡಿದರು. ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಲು ಅವರೇ ಕಾರಣ. ನನ್ನ ಮತ್ತು ಶಾರುಖ್ ಅವರ ನಡುವಿನ ಬಾಂಧವ್ಯ, ಬರವಣಿಗೆ, ಮಾತುಗಳಿಗೂ ಮೀರಿದ್ದು. ನಮ್ಮ ಮಧ್ಯೆ ಪರಸ್ಪರ ಪ್ರೀತಿ, ನಂಬಿಕೆ ಅಪಾರವಾಗಿದೆ. ನಾನು ಅವರಲ್ಲಿನ ಕಲಾವಿದನನ್ನು ಎಷ್ಟು ಗೌರವಿಸುತ್ತೇನೋ, ಅಷ್ಟೇ ಅವರನ್ನೊಬ್ಬ ಸಾಮಾನ್ಯ ಮನುಷ್ಯನನ್ನಾಗಿಯೂ ಗೌರವಿಸುತ್ತೇನೆ’ ಎಂದು ಹೇಳಿದರು. ಈ ಮಾತುಗಳನ್ನಾಡುವಾಗ ದೀಪಿಕಾ ಮಾಧ್ಯಮದವರು ಕೇಳಿದ ಪ್ರಶ್ನೆಗೂ ಉತ್ತರಿಸಿದೆ. ಈ ವೇಳೆ ಮಾತನಾಡುವ ನಟಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ.