ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ನೇಹಿತನ ಬಳಿಯಿದ್ದ ಪರವಾನಗಿ ಪಡೆದ ಪಿಸ್ತೂಲ್’ನ್ನು ನೋಡುತ್ತಿದ್ದ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಗುಂಡು ತಗುಲಿರುವ ಘಟನೆ ಬೆಂಗಳೂರು ಹೊರಮಾವು ಬಡಾವಣೆಯ ಆಶೀರ್ವಾದ ಕಾಲೊನಿಯ ಮನೆಯೊಂದರಲ್ಲಿ ಸೋಮವಾರ ನಡೆದಿದೆ.
ಕಾಕ್ಸ್ ಟೌನ್ ನಿವಾಸಿಯಾದ ರೇಚೆಲ್ (32) ಗಾಯಗೊಂಡ ಮಹಿಳೆಯಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ರೇಚೆಲ್ ಅವರ ಸ್ನೇಹಿತ ನಿಖಿಲ್ ನಾರಾಯಣಸ್ವಾಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ 125ಬಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 25 (1ಬಿ), 27, 30ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಕ್ಸ್ ಟೌನ್‌ನ ನಿವಾಸಿ ರೇಚಲ್ ಅವರು ಜುಲೈ 28ರಂದು ರಾತ್ರಿ ಹೊರಮಾವು ಸಮೀಪದ ಆಶೀರ್ವಾದ ಕಾಲೊನಿಯಲ್ಲಿ ಇರುವ ನಿಖಿಲ್ ನಾಯಕ್ ಅವರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ನಿಖಿಲ್ ನಾಯಕ್ ಅವರು ಶೌಚಾಲಯಕ್ಕೆ ಹೋಗಿದ್ದರು ಎನ್ನಲಾಗಿದೆ.