ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ 40 ವರ್ಷದ ಮಹಿಳೆಯನ್ನು ಮೀನುಗಾರರು ಮತ್ತು ಪೊಲೀಸರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಅಧಿಕಾರಿಗಳ ಪ್ರಕಾರ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಾಗಲಕ್ಷ್ಮಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಾಗಲಕ್ಷ್ಮಿ ನದಿಗೆ ಹಾರುತ್ತಿದ್ದಂತೆ, ಅಪರಿಚಿತ ವ್ಯಕ್ತಿಗಳಿಂದ ತುರ್ತು ಕರೆ ಪೊಲೀಸರಿಗೆ ಬಂದ ಕಾರಣ ಸರಿಯಾದ ಸಮಯಕ್ಕೆ ಸಬ್ ಇನ್ಸ್ ಪೆಕ್ಟರ್ ರಟ್ಟಯ್ಯ, ಕಾನ್ ಸ್ಟೆಬಲ್ ಲೀಲಾಕುಮಾರ್ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಸ್ಥಳೀಯ ಮೀನುಗಾರರ ನೆರವು ಕೋರಿದ್ದಾರೆ.
ದೋಣಿಯ ಮೂಲಕ ತ್ವರಿತವಾಗಿ ಆಗಮಿಸಿದ ಮೀನುಗಾರರು ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು. ನಂತರ ಪೊಲೀಸರು ನಾಗಲಕ್ಷ್ಮಿಯನ್ನು ಠಾಣೆಗೆ ಕರೆದೊಯ್ದು, ಕೌನ್ಸಿಲಿಂಗ್ ನಂತರ ಆಕೆಯ ಸಂಬಂಧಿಕರಿಗೆ ಒಪ್ಪಿಸಿದ್ದಾರೆ.