Tuesday, October 14, 2025

ಮಹಿಳೆಯ ಬಾಯಿಗೆ ಜಿಲೆಟಿನ್‌ ಕಡ್ಡಿ ಇಟ್ಟು ಸ್ಫೋಟಿಸಿ ಬರ್ಬರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರಲ್ಲಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.ಲಾಡ್ಜ್ ಒಂದರಲ್ಲಿ ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಬಾಯಿಗೆ ಜಿಲೆಟಿನ್ ಕಡ್ಡಿ (gelatin stick) ಇರಿಸಿ ಸ್ಫೋಟಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಕಿರಾತಕ ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದಾನೆ.

ಮೈಸೂರಿನ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಈ ಭೀಕರವಾದ ಕೊಲೆ ನಡೆದಿದೆ. ಸಿದ್ದರಾಜು ಎಂಬಾತನಿಂದ ರಕ್ಷಿತಾ (20) ಎನ್ನುವ ಯುವತಿಯ ಭೀಕರ ಕೊಲೆಯಾಗಿದೆ. ರಕ್ಷಿತಾ ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ನಿವಾಸಿ ಆಗಿದ್ದು, ಇನ್ನು ಸಿದ್ದರಾಜು ಪಿರಿಯಾಪಟ್ಟಣ ಬಿಳಿಕೆರೆ ಗ್ರಾಮದ ನಿವಾಸಿಯಾಗಿದ್ದಾನೇ ಎಂದು ತಿಳಿದು ಬಂದಿದೆ.

ರಕ್ಷಿತಾ ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದಳು. ಮದುವೆಯಾದರು ಸಹ ಸಿದ್ದರಾಜು ಜೊತೆಗೆ ರಕ್ಷಿತಾ ಆನಂತಿಕ ಸಂಬಂಧ ಇಟ್ಟುಕೊಂಡಿದ್ದಳು. ಅನೈತಿಕ ಸಂಬಂಧದಿಂದ ಇದೀಗ ರಕ್ಷಿತಾಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!