Saturday, January 10, 2026

ಯುವಕನೊಂದಿಗೆ ಅಕ್ರಮ ಸಂಬಂಧ: ಕತ್ತು ಕೊಯ್ದು ಮಹಿಳೆಯ ಬರ್ಬರ ಕೊಲೆ

ಹೊಸದಿಗಂತ ವರದಿ ವಿಜಯನಗರ:

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳನ್ನು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೊಸಪೇಟೆಯ ಚಾಪಲಘಟ್ಟ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಉಮಾ (35) ಎಂಬ ಮಹಿಳೆ ಕೊಲೆಯಾಗಿದ್ದು, ಮೃತಳು ನಗರದ ರೈಲ್ವೆ ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Rice series 25 | ಬರೀ ಕೊತ್ತಂಬರಿ ಸೊಪ್ಪಿದ್ರೆ ಸಾಕು, ಟೇಸ್ಟಿ ರೈಸ್‌ ಮಾಡ್ಬೋದು ಗೊತ್ತಾ?

13 ವರ್ಷದ ಹಿಂದೆ ಆಂದ್ರಪ್ರದೇಶ ಮೂಲದ ರಾಮಾಂಜನೇಯ ಎಂಬಾತನನ್ನು ಮದುವೆಯಾಗಿದ್ದ ಉಮಾ, ಐದಾರು ವರ್ಷದ ಹಿಂದೆ ಗಂಡನಿಂದ ಬೇರ್ಪಟ್ಟು, ಹೊಸಪೇಟೆಯ ತವರು ಮನೆ ಸೇರಿದ್ದಳು. ಮೃತಳಿಗೆ ಮೂವರು ಗಂಡು ಮಕ್ಕಳಿದ್ದು, ಹಿರಿಯ ಮಗ ಆಂಧ್ರಪ್ರದೇಶದಲ್ಲಿ ಪತಿಯೊಂದಿಗೆ ಇದ್ದು, ಇನ್ನಿಬ್ಬರು ಮಕ್ಕಳು ಉಮಾ ಅವರೊಂದಿಗಿದ್ದರು. ಈ ನಡುವೆ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕೊಲೆಗೆ ಇದೇ ಕಾರಣ ಎನ್ನಲಾಗುತ್ತಿದೆ.

ಮಹಿಳೆ ಕೊಲೆಯಾಗಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಸ್‌ಪಿ ಎಸ್.ಜಾಹ್ನವಿ, ಎಎಸ್‌ಪಿ ಜಿ.ಮಂಜುನಾಥ್‌, ಡಿವೈಎಸ್‌ಪಿ ಟಿ.ಮಂಜುನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಚಿತ್ತವಾಡ್ಗಿ ಠಾಣೆ ಪೊಲೀಸರು, ಆರೋಪಿ ಪತ್ತೆಗಾಗಿ ಶೋಧ ನಡೆಸಿದ್ದಾರೆ.

error: Content is protected !!