ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು 112 ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ಹೇಳಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಕ್ಷಿಪ್ರ ಕಾರ್ಯಾಚರಣೆಯಿಂದ ಮಹಿಳೆಯನ್ನು ಬದುಕಿಸಲಾಗಿದೆ.
ಮಹಿಳೆಯೊಬ್ಬರು 112 ಕ್ಕೆ ಕರೆ ಮಾಡಿ ನನಗೆ ಬದುಕಲು ಇಷ್ಟವಿಲ್ಲ. ನಾನು ಆತ್ಮಹತ್ಯೆ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆಕೆಯ ಜತೆ ಮಾತನಾಡಿದ ಸಿಬ್ಬಂದಿಗೆ ಸಂದರ್ಭದ ಗಂಭೀರತೆ ಅರ್ಥವಾಗಿದೆ.
ಮತ್ತೆ ಕರೆ ಮಾಡಲು ಹೋದಾಗ ಫೋನ್ ಸ್ವಿಚ್ ಆಫ್ ಆಗಿದೆ. ಆದರೆ ಫೋನ್ ಟ್ರಾಕ್ ಮಾಡಿದ ಸಿಬ್ಬಂದಿ 21 ನಿಮಿಷಗಳಲ್ಲಿ ಸ್ಥಳ ತಲುಪಿದ್ದಾರೆ. ಬೆಂಗಳೂರಿನ ಬೆಳ್ಳಂದೂರು ಕೆರೆ ಸಮೀಪ ಹುಡುಕಾಡಿದ್ದು, ಮಹಿಳೆಯೊಬ್ಬರು ಆತ್ಮಹತ್ಯೆಗೆ ಸಜ್ಜಾಗಿದ್ದು ಕಂಡಿದೆ.
ತಕ್ಷಣವೇ ಅವರನ್ನು ರಕ್ಷಣೆ ಮಾಡಿ, ಕೌನ್ಸೆಲಿಂಗ್ ನೀಡಿ, ಆತ್ಮಹತ್ಯೆ ಆಲೋಚನೆ ಕೈಬಿಡಿಸಿದ್ದಾರೆ. ಕುಟುಂಬದವರನ್ನು ಕರೆಸಿ ಸಮಾಧಾನಿಸಿ ಮನೆಗೆ ಕಳುಹಿಸಿದ್ದಾರೆ.



