ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಗೃಹಿಣಿಯೊಬ್ಬರು ವಾಟ್ಸಾಪ್ ಸ್ಟೇಟಸ್‌ಗೆ ಡೆತ್ ನೋಟ್ ಬರೆದು ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಗ್ಗನಹಳ್ಳಿಯ ನಿವಾಸಿ ಪವಿತ್ರ ತನ್ನ ಗಂಡ ಹಾಗೂ ಆತನ ಗರ್ಲ್‌ಫ್ರೆಂಡ್ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಪವಿತ್ರ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದರು.
ಇತ್ತೀಚೆಗೆ ಹುಡುಗಿಯೊಬ್ಬಳ ಜೊತೆ ಹೆಚ್ಚಿನ ಒಡನಾಟ ಪವಿತ್ರಾಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ಗಂಡ ಹೆಂಡತಿ ನಡುವೆ ಸಾಕಷ್ಟು ಜಗಳ ಆಗಿತ್ತು. ಈ ಬಗ್ಗೆ ಪವಿತ್ರ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದರು. ಇದೀಗ ಪವಿತ್ರ ತಾಯಿ ಅಳಿಯನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.