ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೊಸಕೋಟೆಯ ನಿವಾಸಿಯೊಬ್ಬರು ಊಟದ ನಂತರ ಏಕಾಏಕಿ ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೊಸಕೋಟೆಯ ದೇಗುಲವೊಂದರಲ್ಲಿ ಪುಳಿಯೊಗರೆ ಪಾಯಸ ಹಾಗೂ ಲಡ್ಡು ಸೇವಿಸಿದ ನಂತರ ವಾಂತಿ ಬೇಧಿ ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಪ್ರಸಾದ ಸೇವಿಸಿದ 15 ಕ್ಕೂ ಹೆಚ್ಚು ಮಂದಿಯೂ ಅಸ್ವಸ್ಥರಾಗಿದ್ದು, ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ.