ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗ ಪರೀಕ್ಷೆಯಲ್ಲಿ ಫೇಲ್ ಆದ ಎನ್ನುವ ಕಾರಣಕ್ಕೆ ಮನನೊಂದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬುಧವಾರ (ಆಗಸ್ಟ್ 9)ದಂದು ಹೈದರಾಬಾದ್‌ನ ಗಾಜುಲರಾಮರಾಮ್ ಎಂಬಲ್ಲಿ ನಡೆದಿದೆ.
ಮೃತರನ್ನು ಪುಷ್ಪ ಜ್ಯೋತಿ (41) ಎಂದು ಗುರುತಿಸಲಾಗಿದೆ.
ಜೀಡಿಮೆಟ್ಲ ವ್ಯಾಪ್ತಿಯ ಗಾಜುಲರಾಮರ ಬಾಲಾಜಿ ಎನ್‌ಕ್ಲೇವ್‌ನಲ್ಲಿ ನಾಗಭೂಷಣಂ ಮತ್ತು ಪುಷ್ಪಜ್ಯೋತಿ ದಂಪತಿ ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಓರ್ವ ಇತ್ತೀಚೆಗೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆ ಬರೆದಿದ್ದರು. ಆದರೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಇದರಿಂದ ಮನನೊಂದ ಪುಷ್ಪ ಜ್ಯೋತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತುಕೊಂಡಿದ್ದಾರೆ.