ಬಸ್‌ನಲ್ಲೇ ಎಲೆ ಅಡಿಕೆ ಎಂಜಲು ಉಗಿದ ಮಹಿಳೆ, ಪ್ರಶ್ನೆ ಮಾಡಿದಕ್ಕೆ ಕಂಡಕ್ಟರ್‌ ಮೇಲೆ ಪ್ರಯಾಣಿಕರಿಂದ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಮಕೂರಿನಲ್ಲಿ ಕೆಎಸ್‌‌ಆರ್‌‌ಟಿಸಿ ಬಸ್ ನಲ್ಲಿ ಎಲೆ ಅಡಿಕೆ ತಿಂದು ಎಂಜಲನ್ನು ಮಹಿಳೆ ಉಗಿದಿದ್ದರು. ಇದನ್ನು ನೋಡಿ ಪ್ರಶ್ನೆ ಮಾಡಿದ ಕಂಡಕ್ಟರ್‌ ಮೇಲೆಯೇ ಪ್ರಯಾಣಿಕರು ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪಾವಗಡದಿಂದ ತುಮಕೂರು ಕಡೆಗೆ ಹೊರಟ್ಟಿದ್ದ ಕೆಎಸ್‌‌ಆರ್‌‌ಟಿಸಿ ಬಸ್‌ನಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು 6 ಜನ ಬಸ್ ನಲ್ಲಿ ಕುಳಿತಿದ್ದರು. ಇವರು ಬೆಂಗಳೂರಿಗೆ ಪ್ರಯಾಣ ಮಾಡುವವರಿದ್ದರು. ಆದರೆ ಕಂಡಕ್ಟರ್‌ ಬಸ್ ಬೆಂಗಳೂರಿಗೆ ಹೋಗಲ್ಲ ತುಮಕೂರಿಗೆ ಹೋಗುತ್ತೆ ಬಸ್ ನಿಂದ ಇಳಿರಿ ಎಂದು ಹೇಳಿದರು. ಈ ವೇಳೆ ಇಳಿಯುವಾಗ ಬಸ್ ಒಳಗೆ ಓರ್ವ ಮಹಿಳೆ ಎಲೆ-ಅಡಿಕೆ ಎಂಜಲು ಉಗಿದಿದ್ದಾಳೆ.

ಇದನ್ನ ನೋಡಿ ಕಂಡಕ್ಟರ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕ್ಲೀನ್ ಮಾಡುವಂತೆ ಮಹಿಳೆಗೆ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಬಸ್ ಕಂಡಕ್ಟರ್ ಗೆ ಮಹಿಳೆ ಜೊತೆಗಿದ್ದವರು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಈ ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡು ಮಹಿಳೆ ಸೇರಿ ನಾಲ್ವರನ್ನ ಪಾವಗಡ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here