ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಉದಯಪುರದಲ್ಲಿ ಐಟಿ ಸಂಸ್ಥೆಯ ಉದ್ಯೋಗಿ ಮಹಿಳೆಯ ಮೇಲೆ ಕಾರಿನೊಳಗೆ ಅತ್ಯಾಚಾರ ನಡೆದಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಜಿಕೆಎಂ ಐಟಿ ಕಂಪನಿಯ ಸಿಇಒ ಜಿತೇಶ್ ಪ್ರಕಾಶ್ ಸಿಸೋಡಿಯಾ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ದೂರು ದಾಖಾಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಡಿಸೆಂಬರ್ 20ರಂದು ಶೋಬಾಗ್‌ಪುರದಲ್ಲಿನ ಹೋಟೆಲ್‌ನಲ್ಲಿ ನಡೆದ ಹುಟ್ಟುಹಬ್ಬದ ಸಮಾರಂಭಕ್ಕೆ ಸಂತ್ರಸ್ತೆ ಹಾಜರಾಗಿದ್ದರು. ಪಾರ್ಟಿ ತಡರಾತ್ರಿ ತನಕ ನಡೆದಿದ್ದು, ಮದ್ಯಪಾನವೂ ನಡೆದಿತ್ತು. ಬಳಿಕ ಮನೆಗೆ ತೆರಳುವ ವೇಳೆ ಆರೋಪಿಗಳ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಅಸ್ವಸ್ಥತೆ ಕಾಣಿಸಿಕೊಂಡಿದೆ.
ಇದನ್ನೂ ಓದಿ:
ಪ್ರಯಾಣದ ಮಧ್ಯೆ ಮಹಿಳೆಗೆ ಶಂಕಾಸ್ಪದ ವಸ್ತುವನ್ನು ಸೇವಿಸಲು ನೀಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆಕೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಇದ್ದಾಗ ಕಾರಿನೊಳಗೆ ದೌರ್ಜನ್ಯ ನಡೆಸಲಾಗಿದೆ ಎನ್ನಲಾಗಿದೆ. ಬಳಿಕ ಪ್ರಜ್ಞೆ ಬಂದಾಗ ದೇಹದ ಹಲವೆಡೆ ಗಾಯಗಳು, ಖಾಸಗಿ ಭಾಗಗಳಲ್ಲಿ ನೋವು ಹಾಗೂ ಕೆಲವು ವಸ್ತುಗಳು ನಾಪತ್ತೆಯಾಗಿರುವುದನ್ನು ಮಹಿಳೆ ಗಮನಿಸಿದ್ದಾರೆ.
ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಅಪರಾಧಕ್ಕೆ ಸಂಬಂಧಿಸಿದ ದೃಶ್ಯಗಳು ದಾಖಲಾಗಿದ್ದು, ಅವು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಮಹಿಳೆ ಡಿಸೆಂಬರ್ 23ರಂದು ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

