September 30, 2026
Wednesday, September 30, 2026
spot_img

ಮತ್ತೆ ರಾಹುಲ್ ಗಾಂಧಿ ಹೊಸ ರಾಗ: ಹಿಂದೂ ಮಹಾಸಾಗರದಲ್ಲಿ ಇರಾನ್‌ ಯುದ್ಧನೌಕೆ ಮುಳುಗಿದ್ರೂ ಮೋದಿ ಮೌನ ಏಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ನಡೆಸಿದ ದಾಳಿಗೆ ಇರಾನ್ ಯುದ್ಧನೌಕೆ ಮುಳುಗಿ 87 ಜನರು ಸಾವನ್ನಪ್ಪಿದ್ದಾರೆ. ಇದರ ವಿಚಾರವಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ಅವರ ಮೌನದ ಕುರಿತು ಪ್ರಶ್ನೆ ಮಾಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌ ಗಾಂಧಿ, ಮೌನ ಮುಂದೆಯೇ ಸಮುದ್ರದಲ್ಲಿ ಬಿರುಗಾಳಿ ಎದ್ದಿದೆ. ಭಾರತದ ತೈಲ ಸರಬರಾಜಿನ ಸ್ಥಿತಿ ಅಪಾಯದಲ್ಲಿದೆ. ಎಲ್‌ಪಿಜಿ, ಎಲ್‌ಎನ್‌ಜಿ ಪರಿಸ್ಥಿತಿಯಂತೂ ಇನ್ನೂ ಕೆಟ್ಟದಾಗಿದೆ. ಇರಾನ್‌ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿದ್ರು ಪ್ರಧಾನಿ ಏನನ್ನೂ ಹೇಳಿಲ್ಲ. ಇಂತಹ ಕ್ಷಣದಲ್ಲಿ ನಮಗೆ ಚಕ್ರದಲ್ಲಿ ಬಲವಾದ ಕೈ ಬೇಕು. ಆದ್ರೆ ಭಾರತವುನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನ ಬಿಟ್ಟುಕೊಟ್ಟ ಹಾಗೂ ರಾಜಿ ಮಾಡಿಕೊಂಡ ಪ್ರಧಾನಿಯನ್ನ ಹೊಂದಿದೆ ಎಂದು ಟೀಕಿಸಿದ್ದಾರೆ.

Must Read