ಬಿಯರ್ಡ್‌ ಲೇಡಿ: ಉದ್ಧವಾದ ಗಡ್ಡ ಬೆಳೆಸಿ ಗಿನ್ನಿಸ್ ದಾಖಲೆ ಬರೆದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಪುರುಷರು ಗಡ್ಡವನ್ನು ಬೆಳೆಸುತ್ತಾರೆ. ಆದರೆ ಇಲ್ಲಿ ಓರ್ವ ಮಹಿಳೆ ಗಡ್ಡ ಬೆಳೆಸಿ ಗಿನ್ನೀಸ್‌ ದಾಖಲೆ ಬರೆದಿದ್ದಾರೆ. ಅಮೆರಿಕದ ಎರಿನ್ ಹನಿಕಟ್ ಎಂಬ 38 ವರ್ಷದ ಮಹಿಳೆ ಅಪರೂಪದ ದಾಖಲೆಯನ್ನು ಪಡೆದಿದ್ದಾರೆ. ಈಕೆ 11.8 ಇಂಚು ವಿಶ್ವದ ಅತಿ ಉದ್ದನೆಯ ಗಡ್ಡವನ್ನು ಹೊಂದಿರುವ ಮಹಿಳೆಯಾಗಿ ಅವರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದಾರೆ.

ಮಹಿಳೆಗೆ ಬಾಲ್ಯದಿಂದಲೂ ಆನುವಂಶಿಕ ಸಮಸ್ಯೆಗಳಿದ್ದವು. ಇವರು 13ನೇ ವಯಸ್ಸಿಗೆ ಬರುವಷ್ಟರಲ್ಲಿ ಗಡ್ಡ ಬೆಳೆಯಲಾರಂಭಿಸಿತು. ಬೇಡದ ಕೂದಲು ತೆಗೆಯಲು ನಾನಾ ಬಗೆಯ ಕ್ರೀಂ, ಜೆಲ್ ಗಳನ್ನು ಬಳಸಿದರೂ ಪ್ರಯೋಜನವಾಗಿಲ್ಲ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಶೇವ್ ಮಾಡುತ್ತಿದ್ದರು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮನೆಯಿಂದ ಹೊರಗೆ ಬರಲಾಗದೆ ವರ್ಷಗಟ್ಟಲೆ ನರಕಯಾತನೆ ಅನುಭವಿಸಿದ್ದರಂತೆ. ಈಕೆಯ ಸ್ಥಿತಿಯನ್ನು ಗಮನಿಸಿದ ಸ್ನೇಹಿತರು, ಬಂಧುಗಳು ಗಡ್ಡ ಬಿಟ್ಟರೂ ನೀನು ಸುಂದರವಾಗಿ ಕಾಣುತ್ತಿದ್ದೀಯಾ ಎಂಬ ಮೆಚ್ಚುಗೆಯ ಮಾತನಾಡಿ ಈಕೆಯನ್ನು ಪ್ರೋತ್ಸಾಹಿಸಿದರು.

ಒಂದೆಡೆ ವಂಶವಾಹಿ ಸಮಸ್ಯೆಗಳು ಆಕೆಯನ್ನು ಕಾಡುತ್ತಿದ್ದರೆ.. ಇನ್ನೊಂದೆಡೆ ಬ್ಯಾಕ್ಟೀರಿಯಾ ಸೋಂಕಿನಿಂದ ಕಾಲು ಕಳೆದುಕೊಳ್ಳಬೇಕಾಯಿತು. ಇದರಿಂದ ಆಕೆಗೆ ಬಹಳ ದುಃಖವಾಯಿತು. ಹಲವು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅವೆಲ್ಲವನ್ನೂ ಲೆಕ್ಕಿಸದೆ ಹನಿಕಟ್ ಮುಂದೆ ಸಾಗಿದರು. ಕೊನೆಗೂ ಅತಿ ಉದ್ದದ ಗಡ್ಡ ಹೊಂದಿರುವ ಮಹಿಳೆ ಎಂಬ ಗಿನ್ನಿಸ್ ದಾಖಲೆ ಬರೆದಿದ್ದಾರೆ.

ಎರಡು ದಿನಗಳ ಹಿಂದೆ, ಈ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ವಿಷಯವನ್ನು ಪೋಸ್ಟ್ ಮಾಡಲಾಗಿದೆ. ಹಲವು ಸವಾಲುಗಳನ್ನು ಎದುರಿಸಿದರೂ ಸಕಾರಾತ್ಮಕ ಮನೋಭಾವದಿಂದ ಮುನ್ನಡೆದಿದ್ದೇನೆ ಎಂದು ಹನಿಕಟ್ ಹೇಳಿದರು. ಅವರು ಸಾಧಿಸಿದ ಈ ದಾಖಲೆಯು ಚಿಕಿತ್ಸೆಗೆ ಒಳಗಾಗಲು ಯಾವುದಾದರೂ ರೂಪದಲ್ಲಿ ಸಹಾಯ ಮಾಡುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. ಈ ದಾಖಲೆಯನ್ನು ತಮ್ಮ ಹಿತೈಷಿಗಳು ಮತ್ತು ಕುಟುಂಬ ಸದಸ್ಯರಿಗೆ ಅರ್ಪಿಸುತ್ತಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!