ಸಾಯಬೇಕೆಂದು ನೀರಿಗೆ ಹಾರಿ ಆಂಜನೇಯ ಮಂತ್ರ ಜಪಿಸಿದ ಮಹಿಳೆ, ಯುವಕರಿಂದ ರಕ್ಷಣೆ

ಹೊಸದಿಗಂತ ವರದಿ ಚಿಕ್ಕಮಗಳೂರು:

ಆತ್ಮಹತ್ಯೆಗೆ ನಿರ್ಧರಿಸಿ ಕೆರೆಗೆ ಹಾರಿ ನಂತರ ಜೀವಭಯದಿಂದ ಆಂಜನೇಯನ ಮೊರೆ ಹೋದ ಮಹಿಳೆಯೊಬ್ಬರನ್ನು ಯುವಕರಿಬ್ಬರು ರಕ್ಷಿಸಿದ ಘಟನೆ ನಗರ ಸಮೀಪದ ಅಲ್ಲಂಪುರ ಕೆರೆಯಲ್ಲಿ ನಡೆದಿದೆ.

ನಗರದ ರಾಮನಹಳ್ಳಿ ನಿವಾಸಿ ರಂಜಿತ ಪತಿಯೊಂದಿಗೆ ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲೆಂದು ಕೆರೆಗೆ ಹಾರಿದ್ದಾರೆ. ಬಳಿಕ ಆಕೆಗೆ ಬದುಕಬೇಕೆನ್ನಿಸಿ ಕಾಪಾಡು ಆಂಜನೇಯ ಎಂದು ಗೋಗರೆಯುವ ದೃಶ್ಯವನ್ನು ದಾರಿಯಲ್ಲಿ ಹೋಗುತ್ತಿದ್ದ ಪಕ್ಕದ ಹೋಂಸ್ಟೇ ಮಾಲೀಕ ರಮೇಶ್ ಗಮನಿಸಿದ್ದಾರೆ.

ಕೂಡಲೇ ಸುಮಂತ್ ಮತ್ತು ಪ್ರಸನ್ನ ಎಂಬಿಬ್ಬರನ್ನು ಕರೆಸಿದ್ದಾರೆ. ಅವರು ಕೆರೆಗೆ ಹಾರಿ ಮುಳುಗುತ್ತಿದ್ದ ಮಹಿಳೆಯನ್ನು ಎಳೆದು ತಂದು ರಕ್ಷಿಸಿದ್ದಾರೆ. ಮಹಿಳೆಯ ಹಣೆಬರಹ ಗಟ್ಟಿಇತ್ತು. ಕೆರೆಗೆಹಾರಿ ಮುಳುಗಿ, ತೇಲಾಡಿ, ಗೋಳಾಡಿ ಬದುಕುಳಿದಿದ್ದಾಳೆ. ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!