ಹೊಸದಿಗಂತ ಡಿಜಿಟಲ್ ಡೆಸ್ಕ್:
ಬನ್ನೇರುಘಟ್ಟ ಪಾರ್ಕ್‌ನಲ್ಲಿ ಗಂಡ- ಮೂವರು ಮಕ್ಕಳನ್ನು ಬಿಟ್ಟು ಪತ್ನಿ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಈ ಘಟನೆಯಿಂದ ಪತಿ-ಮಕ್ಕಳು ಶಾಕ್‌ನಲ್ಲಿದ್ದಾರೆ.
ಪ್ರೀತಿಸಿ ಮಂಜುನಾಥ್ ನನ್ನು ಮದುವೆಯಾಗಿದ್ದ ಲೀಲಾವತಿ ಮದುವೆಯಾದ 11 ವರ್ಷದ ಬಳಿಕ ಗಂಡ, ಮೂವರು ಮಕ್ಕಳನ್ನು ಬಿಟ್ಟು ಹೊಸ ಲವ್ವರ್ ಜೊತೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಪ್ರೀತಿಸಿ ಮದುವೆಯಾದ ಲೀಲಾವತಿ , ಮನೆ ಬಿಟ್ಟು ಓಡಿ ಹೋಗಿರುವುದನ್ನು ಕಂಡು ಗಂಡ ಮಂಜುನಾಥ್ ಈಗ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಹೊಸ ಲವ್ವರ್ ಜೊತೆ ಮೂರು ಮಕ್ಕಳ ತಾಯಿಯಾಗಿರುವ ಲೀಲಾವತಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ.
ಕ್ಯಾಬ್ ಡ್ರೈವರ್ ಆಗಿದ್ದ ಪತಿ ಮಂಜುನಾಥ್ ಹಾಗೂ ಲೀಲಾವತಿ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಇತ್ತು. ಬಸವನಪುರದಲ್ಲಿ ಮಂಜುನಾಥ್- ಲೀಲಾವತಿ ವಾಸ ಇದ್ದರು. ಕಳೆದ ಎರಡು ವರ್ಷಗಳ ಹಿಂದೆ ಲೀಲಾವತಿಗೆ ಸಂತೋಷ್ ಎಂಬಾತನ ಪರಿಚಯವಾಗಿದೆ. ಸಂತೋಷ್ ಜೊತೆಗೆ ಮಂಜುನಾಥ್ ಪತ್ನಿ ಲೀಲಾವತಿ ವಿವಾಹೇತರ ಸಂಬಂಧ ಹೊಂದಿದ್ದರು.
ಸಾಕಷ್ಟು ಬಾರಿ ಇದನ್ನು ಸಹಜವಾಗಿಯೇ ಪತಿ ಮಂಜುನಾಥ್ ಪ್ರಶ್ನೆ ಮಾಡಿದ್ದರು. ಕಳೆದ ಭಾನುವಾರ ಮಂಜುನಾಥ್ ಪತ್ನಿ ಮನೆಯಿಂದ ಹೋಗಿದ್ದಾಳೆ. ಮನೆಯಲ್ಲಿ ಈಗ ಲೀಲಾವತಿ ಗಂಡ ಹಾಗೂ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ದೂರು ದಾಖಲು ಮಾಡಿದ್ದಾರೆ.
ಪಾರ್ಕ್‌ನಲ್ಲಿ ಗಂಡ- 3ಮಕ್ಕಳನ್ನು ಬಿಟ್ಟು ಪ್ರೇಮಿ ಜೊತೆ ಓಡಿಹೋದ ಮಹಿಳೆ!
